ಚಲಿಸುತ್ತಿದ್ದ ರೈಲಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

ಕಲಬುರಗಿ,ಆ.31-ಚಲಿಸುತ್ತಿದ್ದ ರೈಲಿಗೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ರೈಲ್ವೆ ಸ್ಟೇಷನ್ ಸಮೀಪದ ಶಹಾಬಾದ್ ಬ್ರಿಡ್ಜ್ ಹತ್ತಿರ ಶನಿವಾರ ನಡೆದಿದೆ.
ಮೃತರನ್ನು ಕಲಬುರಗಿ ನಗರದ ಹೊರವಲಯದ ನಂದಿಕೂರ ಗ್ರಾಮದ ನಿವಾಸಿ ಶರಣಬಸಪ್ಪ ಗುಂಡಪ್ಪ ಉಮ್ಮರ್ಗಿ (32) ಎಂದು ಗುರುತಿಸಲಾಗಿದೆ.
ಮೃತ ಶರಣಬಸಪ್ಪ ತನ್ನ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ವ್ಯಕ್ತಿಯ ಗುರುತು ಪತ್ತೆ ಹಚ್ಚಿದ ಬಳಿಕ ವೈದ್ಯರಿಂದ ಮೃತದೇಹ ಪರೀಕ್ಷೆ ಮಾಡಿಸಿ, ಮೃತದೇಹವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವಾಡಿ ರೈಲ್ವೆ ಠಾಣೆಯ ಪೆÇಲೀಸರು ತಿಳಿಸಿದ್ದಾರೆ.
ಈ ಕುರಿತು ವಾಡಿ ರೈಲ್ವೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.