Home ಜಿಲ್ಲೆ ಮಲ್ಲಿಕಾರ್ಜುನ ಸ್ವಾಮಿಗಳು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ:ಸುನೀಲಗೌಡ ಪಾಟೀಲ

ಮಲ್ಲಿಕಾರ್ಜುನ ಸ್ವಾಮಿಗಳು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ:ಸುನೀಲಗೌಡ ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ, ಎ. ೫: ಸಮಾಜಮುಖಿ ಕಾರ್ಯಗಳ ಮೂಲಕ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಶುಕ್ರವಾರ ರಾತ್ರಿ ವಿಜಯಪುರ ತಾಲೂಕಿನ ಹೊನಗನಹಳ್ಳಿ- ಸವನಹಳ್ಳಿಯ ಶ್ರೀ ಆತ್ಮಾನಂದ ಆಶ್ರಮದಲ್ಲಿ ನಡೆಯುತ್ತಿರುವ ಪ. ಪೂ. ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ೫ನೇ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಹಸಿದು ಬಂದವರಿಗೆ ಅನ್ನ ಹಾಕಿದ್ದಾರೆ. ಬಡವರಿಗೆ ನೆರವಾಗಿದ್ದಾರೆ. ಸಮಾಜಮುಖಿ ಕಾರ್ಯಗಳ ಮೂಲಕ ಭಕ್ತಾದಿಗಳ ಮನಸ್ಸನ್ನು ಗೆದ್ದಿದ್ದಾರೆ. ಹೊನಗನಹಳ್ಳಿ- ಸವನಹಳ್ಳಿ ಗ್ರಾಮಗಳು ತಮ್ಮ ಎರಡು ಕಣ್ಣುಗಳಿದ್ದಂತೆ ಎಂದು ಹೇಳುತ್ತಿದ್ದ ಶ್ರೀಗಳು, ನಾಟಕಗಳಲ್ಲಿ ಬಸವಾದಿ ಶರಣರು, ಬೀರದೇವರ ಪಾತ್ರಗಳಲ್ಲಿ ನಟಿಸಿ ಭಾರತೀಯ ಸಂಸ್ಕೃತಿ, ಪರಂಪರೆ, ಸಮಾಜ ಸುಧಾರಕರ ತತ್ವಾದರ್ಶಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂದಿರುವ ಸಾವಿರಾರು ಭಕ್ತರು ಅವರ ಮೇಲಿರುವ ಭಕ್ತಿಗೆ ಸಾಕ್ಷಿಯಾಗೆದಿ ಎಂದು ಶಾಸಕರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ವಾಜೀಗಳಿಗೆ ಗೌರವ ಸಮರ್ಪಿಸಿದ ಸುನೀಲಗೌಡ ಪಾಟೀಲ ಅವರನ್ನು ಶ್ರೀಶೈಲ ಜಗದ್ಗುರುಗಳು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಮಲ್ಲಿಕಾರ್ಜುನ ಪಂಡಿತಾರಾಜ್ಯ ಶಿವಾಚಾರ್ಯರು ಮಹಾ ಭಗವತ್ಪಾದಂಗಳವರು, ಮಮದಾಪುರ ವಿರಕ್ತಮಠದ ಶ್ರೀ ಮುರುಗೇಂದ್ರ ಮಹಾಸ್ವಾಮೀಜಿ, ನಾಗಠಾಣ ಶ್ರೀ ಉದಯಲಿಂಗೇಶ್ವರ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಸೂತಿಯ ಶ್ರೀ ಜಗದೀಶ್ವರ ಹಿರೇಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯರು, ಮನಗೂಳಿ ವಿಭೂತಿಪುರಮಠ ಶಾಖಾ ಮಠದ ಡಾ. ಮಹಾಂತಲಿAಗ ಶಿವಾಚಾರ್ಯರು, ಆತ್ಮಾನಂದ ಆಶ್ರಮದ ಶ್ರೀ ದಯಾನಂದ ಸ್ವಾಮೀಜಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ಬಸವರಾಜ ರೆಡ್ಡಿ, ನಚಿಕೇತ ಬಿದರಿ, ಮಲ್ಲಿಕಾರ್ಜುನ ಹಳ್ಳಿ, ಹನಮಂತ ಹಚಡದ, ಶಶಿಧರ ಬಿದರಿ, ಸಚೀನ ಬಿದರಿ, ಸಿದ್ದು ಹಂಡಿ, ರಾವುತ ಗಾಣಿಗೇರ, ಶಿವಯ್ಯ ಒಡೆಯರ, ಹೆಸ್ಕಾಂ ಸುಪರಿಂಟೆAಡೆAಟ್ ಎಂಜಿನಿಯರ ಸಿದ್ದಣ್ಣ ಬಿಂಜಗೇರಿ, ಹೊನಗನಹಳ್ಳಿ- ಸವನಹಳ್ಳಿ ಗ್ರಾಮಸ್ಥರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.