
ಜೇವರ್ಗಿ,ಮಾ.2- ಕಳೆದ ಸಂಪತ್ತು, ಕಳೆದ ಆಸ್ತಿ ಮತ್ತೆ ಮರಳಿ ಗಳಿಸಬಹುದು. ಆದರೆ ಕಳೆದು ಹೋದ ಸಮಯ ಎಂದೂ ಮರಳಿ ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಬೆಲೆ ಕೊಡಬೇಕು ಮತ್ತು ಮಾನವೀಯ ಸಂಬಂಧಗಳನ್ನು ಉಳಿಸಿಕೊಳ್ಳಬೇಕು ಎಂದು ಪ್ರಾಂಶುಪಾಲರಾದ ಡಾ. ಶಾಂತಾ ಬಿ. ಅಸ್ಟಿಗೆ ಅಭಿಪ್ರಾಯ ಪಟ್ಟರು.
ಪಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಎಂ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷ ಸ್ಥಾನವಹಿಸಿ ಅವರು ಮಾತನಾಡಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕಲ್ಲಿನಾಥ ಪಾಟೀಲ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಎಂ.ಕಾಂ ಉತ್ತಮ ಕೋರ್ಸಾಗಿದೆ. ಚೆನ್ನಾಗಿ ಅಧ್ಯಯನ ಮಾಡಿ ಒಳ್ಳೆಯ ಜ್ಞಾನ, ಕೌಶಲ್ಯ ಸಂಪಾದಿಸಿ ನಿಮ್ಮ ಗುರಿ ತಲುಪುವ ಕಡೆಗೆ ಲಕ್ಷವಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕಲಬುರಗಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಮಿತ್ ಮಾಸಿಮಡೆ ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲತೆ ಮತ್ತು ಕೌಶಲ್ಯ ಹೊಂದಬೇಕು. ಪದವಿ ಪಡೆದು, ಜ್ಞಾನವಿಲ್ಲದಿದ್ದರೆ ವ್ಯರ್ಥ ಎಂದು ಹೇಳಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಮಾತನಾಡಿದರು.
ವೇದಿಕೆ ಮೇಲೆ ಐಕ್ಯೂಏಸಿ ಸಂಯೋಜಕ ಡಾ.ಸಂದೀಪ್ ತಿವಾರಿ, ಸಿಬ್ಬಂದಿ ಕಾರ್ಯದರ್ಶಿ ಮತ್ತು ಸಾಂಸ್ಕøತಿಕ ಸಮಿತಿ ಸಂಚಾಲಕ ಡಾ. ಖಾಜಾವಲಿ ಈಚನಾಳ, ವಾಣಿಜ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಕು. ಅಪರ್ಣಾ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ. ರಾಬಿಯಾ ಬೇಗಂ, ಡಾ. ಎನ್. ಜಿ. ಶ್ರೀಧರ, ಡಾ. ಖುತೇಜಾ ನಸ್ರಿನ್, ಡಾ. ರೂಪಾ ಕುಲಕರ್ಣಿ,ಡಾ. ಶರಣಪ್ಪ ಗುಂಡಗುರ್ತಿ, ಭೀಮಣ್ಣ, ಭಾಗ್ಯಶ್ರೀ, ಕುಪೇಂದ್ರ, ಡಾ. ರವೀಂದ್ರ, ಡಾ.ಹೊನ್ನೂರ ಸ್ವಾಮಿ,ಮೋಹನ್ ಬೆ?ಲ್ಪತ್ತಾರ,ವಿಕಾಸ್ ಕಾರ್ಯಕ್ರಮ ಆಯೋಜಕರಾದ ನವೀನ್ ಸಿಂಗ್, ಈಶ್ವರ್ ಹಾಗೂ ಇನ್ನಿತರ ಅಧ್ಯಾಪಕರು, ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸರಸ್ವತಿ ಪ್ರಾರ್ಥಿಸಿದರೆ, ಪ್ರೇಮಸಾಗರ ಸ್ವಾಗತಿಸಿದರು. ಅನೀಲಕುಮಾರ ಮತ್ತು ಸುಶೀಲ್ ಅತಿಥಿಗಳನ್ನು ಪರಿಚಯಿಸಿದರು. ಭಾರತಿ ನಿರೂಪಿಸಿದರು, ಶೀಲಾ ವಂದಿಸಿದರು.



























