Home ಕ್ರೈಂ ಸುದ್ದಿಗಳು ಡಿಜಿಟಲ್ ಲಂಚಕ್ಕೆ ಲೋಕಾಯುಕ್ತರ ಬಲೆ: ಇಬ್ಬರು ಇಂಜಿನಿಯರ್‍ಗಳು ಬಂಧನ

ಡಿಜಿಟಲ್ ಲಂಚಕ್ಕೆ ಲೋಕಾಯುಕ್ತರ ಬಲೆ: ಇಬ್ಬರು ಇಂಜಿನಿಯರ್‍ಗಳು ಬಂಧನ

ಯಾದಗಿರಿ:ಏ.3: ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ಇಬ್ಬರು ಇಂಜಿನಿಯರ್‍ಗಳು ಕೊನೆಗೂ ಲೋಕಾಯುಕ್ತರ ಬಲೆಗೆ ಸಿಲುಕಿದ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ವಿಶೇಷವೆಂದರೆ, ಲಂಚದ ಹಣವನ್ನು ನಗದು ರೂಪದಲ್ಲಿ ಅಲ್ಲದೆ ಡಿಜಿಟಲ್ ಪಾವತಿ ಮೂಲಕ ಸ್ವೀಕರಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಶಹಾಪುರ ತಾಲ್ಲೂಕಿನ ಭೀಗುಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಬಿಜೆಎನ್‍ಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಧುಸೂದನ ಮತ್ತು ಜೂನಿಯರ್ ಇಂಜಿನಿಯರ್ ಮಂಜುನಾಥ ಅವರು ಕಾಮಗಾರಿ ಪೂರ್ಣಗೊಂಡಿದ್ದರೂ ಬಿಲ್ ಪಾಸ್ ಮಾಡಲು ?35 ಸಾವಿರ ಲಂಚ ಕೇಳಿದ್ದರೆಂಬ ಆರೋಪ ಕೇಳಿಬಂದಿದೆ.

ವಡಗೇರಾ ತಾಲ್ಲೂಕಿನ ಗಡ್ಡೆಸೂಗುರಿನ ಖಾಸಿಂಸಾಬ್ ಜಲಾಲ್ ಸಾಬ್ ಅವರು ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪೂರ್ವ ಯೋಜಿತ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಲಂಚದ ಹಣವನ್ನು ಫೆÇೀನ್ ಪೇ ಮೂಲಕ ಸ್ವೀಕರಿಸುತ್ತಿದ್ದ ವೇಳೆ ಇಬ್ಬರನ್ನೂ ಸಿಕ್ಕಿಬೀಳಿಸಿದ್ದಾರೆ.

ಲೋಕಾಯುಕ್ತ ಎಸ್‍ಪಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಜೆ.ಹೆಚ್. ಇನಾಂದಾರ್ ನೇತೃತ್ವದ ತಂಡ ಸೂಕ್ತ ಪ್ಲ್ಯಾನ್ ರೂಪಿಸಿ ದಾಳಿ ನಡೆಸಿದ್ದು, ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.

ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಡಿಜಿಟಲ್ ಮಾಧ್ಯಮಗಳ ಮೂಲಕ ಲಂಚ ಸ್ವೀಕಾರ ಮಾಡುವ ಹೊಸ ಪ್ರವೃತ್ತಿ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.