
ಬೆಂಗಳೂರು,ಮಾ.೪-ಭ್ರಷ್ಟ ಅಧಿಕಾರಿಗಳ ವಿರುದ್ಧದ ಬೇಟೆಯನ್ನು ಮುಂದುವರೆಸಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಗದಗ, ಯಾದಗಿರಿ, ಹುಬ್ಬಳ್ಳಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿ ಹಲವೆಡೆ ಏಕಕಾಲದಲ್ಲಿ ದಾಳಿ ಕೈಗೊಂಡು ೧೦ ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಆಸ್ತಿಗಳಿಕೆಯ ದೂರುಗಳ ಹಿನ್ನೆಲೆಯಲ್ಲಿ ಹಿರಿಯ ಇಂಜಿನಿಯರ್‌ಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ನಗದು,ಚಿನ್ನಾಭರಣಗಳು, ಐಷಾರಾಮಿ ವಸ್ತುಗಳು ವಾಹನಗಳನ್ನು ಜಪ್ತಿ ಮಾಡಿ ದಾಖಲೆ ಪತ್ರಗಳಿಗೆ ಶೋಧ ಕೈಗೊಂಡಿದ್ದಾರೆ.
ಮಂಡ್ಯದ ಪಿಡಬ್ಲ್ಯೂಡಿ ಎಇಇ ಸತೀಶ್ ಅವರ ಕಚೇರಿ ಬಂದಿಗೌಡ ಬಡಾವಣೆಯ ಮನೆ , ಸೇರಿದಂತೆ ಒಟ್ಟು ನಾಲ್ಕು ಕಡೆ ದಾಳಿ ಮಾಡಿ ಶೋಧ ನಡೆಸಿದ್ದಾರೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್ ಡಿಸಿಎಲ್ ) ಮುಖ್ಯ ಎಂಜಿನಿಯರ್ ವಸಂತ ವಾಲಪ್ಪ ನಾಯಕ್ ಅವರ ಬಾಗಲಕೋಟೆಯಲ್ಲಿರುವ ಮನೆ ಮೇಲೆ ಹಾಗೂ ಸಹೋದರನ ಮನೆ ಮೇಲೆ ದಾಳಿ ನಡೆಸಲಾಗಿದೆ.
ಬಾಗಲಕೋಟೆ ತಾಲ್ಲೂಕಿನ ಬಿಲ್ ಕೆರೂರ ಗ್ರಾಮದಲ್ಲಿನ ಮನೆ, ವಸಂತ ಅವರ ತಾಯಿ ವಾಸವಿರುವ ಬಸವ ನಗರದ ಮನೆ, ಬಾಗಲಕೋಟೆಯಲ್ಲಿರುವ ವಸಂತ ಸಹೋದರ ಭೀಮಸೇನ ನಾಯಕ ಮನೆ ಮೇಲೆಯೂ ದಾಳಿ ನಡೆಸಿ ದಾಖಲೆ, ಅಕ್ರಮ ಆಸ್ತಿಯ ಶೋಧ ನಡೆಸುತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಮನೆ ಎದುರು ಬಂದು ನಿಂತರೂ ವಸಂತ ಕುಟುಂಬದವರು ಬಾಗಿಲು ತೆರೆಯಲಿಲ್ಲ, ನಂತರ ಅಧಿಕಾರಿಗಳು ಒತ್ತಡ ಹೇರಿ ಬಾಗಿಲು ತೆರೆಸಲಾಗಿದೆ.
ನಗರದ ಸಿಂಗನಾಯಕನ ಹಳ್ಳಿ ರೈತಸೇವಾ ಸಹಕಾರ ಸಂಘ ಯಲಹಂಕದ ಸಿಇಒ ಆರ್ ಶಶಿಧರ್ ಮನೆ ಮೇಲೆ, ಅಲ್ಲದೆ ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಚ್ ಸಿ ಇಂದ್ರೇಶ್ ಅವರ ಕಚೇರಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಯಾಗಿರಿಯಲ್ಲಿ ಎಲೆಕ್ಟ್ರಿಕ್ ಡಿಪಾರ್ಟ್ ಮೆಂಟ್ ನ- ಉಪ ಎಲೆಕ್ಟ್ರಿಕಲ್ ಇನ್ಸ್ ಸ್ಪೆಕ್ಟರ್ ವೀರೇಶ್ ಹಿರೇಮಠ್ ಧಾರವಾಡದಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆಯ ತಾಲೂಕು ಕಲ್ಯಾಣ ಅಧಿಕಾರಿ ಎಂಕೆ ಸುರಕೋಡ ಹಾಸನದಲ್ಲಿ ಮಹಾನಗರ ಪಾಲಿಕೆಯ ಎಇಇ ಎಮ್ ಸಿ ಸತ್ಯನಾರಾಯಣ ಮೈಸೂರಲ್ಲಿ ಜಲ ಭವನದ ಎಇಇ ಹಾಗೂ ಈ ಆಸಿಫ್ ಇಕ್ಬಾಲ್ವಿ ಜಯಪುರದ ಕೃಷ್ಣ ಭಾಗ್ಯ ಜಲನಿಗಮದ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿಜಿ ಆಸ್ತಿ ಮೇಲೂ ಲೋಕಾಯುಕ್ತ ದಾಳಿಯಾಗಿದೆ.

ಲೋಕಾಯುಕ್ತ ದಾಳಿ ನಡೆದ ಗದಗ್ ನ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ. ಸುರಕೋಡ್ ನಿವಾಸ.
ಹಾಸನ ಮಹಾನಗರ ಪಾಲಿಕೆಯ ಎಎಇ ಸತ್ಯನಾರಾಯಣ ಅವರ ರವೀಂದ್ರ ನಗರದ ನಿವಾಸಕ್ಕೆ ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ನೇತೃತ್ವದ ತಂಡ ದಾಳಿ ಮಾಡಿದಾಗ, ಅಧಿಕಾರಿ ಬಾಗಿಲು ತೆಗೆಯಲು ನಿರಾಕರಿಸಿದ್ದಾರೆ.
ಸುಮಾರು ಅರ್ಧ ಗಂಟೆಗಳ ಕಾಲ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ಚಾಣಾಕ್ಷತನ ಮೆರೆದರು. ಠಾಣೆಯ ಜೀಪ್ ಅನ್ನು ಮನೆಯ ಗೋಡೆಗೆ ಅಂಟಿಸಿ ನಿಲ್ಲಿಸಿ, ಅದರ ಮೇಲೆ ಹತ್ತಿ ಮೊದಲ ಮಹಡಿಯ ಮೂಲಕ ಮನೆಯೊಳಗೆ ಪ್ರವೇಶಿಸಿ ಸತ್ಯನಾರಾಯಣ ಅವರಿಗೆ ಶಾಕ್ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆ.ಬಿ.ಜೆ.ಎನ್.ಎಲ್ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ (ಗೊಡಬಂಡಿ) ಅವರ ಮೇಲೆ ನಡೆದ ದಾಳಿ ಕೂಡ ವಿಶೇಷವಾಗಿದೆ. ಪ್ರಕಾಶ್ ಅವರ ಇಂಡಿ ಕಚೇರಿ, ನಿವಾಸದ ಜೊತೆಗೆ ಬೆಂಗಳೂರಿನ ಮಹದೇವಪುರದಲ್ಲಿರುವ ಮನೆ ಹಾಗೂ ಬೀದರ್‌ನ ಹುಮನಾಬಾದ್‌ನಲ್ಲಿರುವ ಮನೆಯ ಮೇಲೆಯೂ ದಾಳಿ ನಡೆದಿದೆ. ವಿಶೇಷವೆಂದರೆ, ಇವರ ಪತ್ನಿಯ ಹೆಸರಿನಲ್ಲಿರುವ ಶಾಲೆಯ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಲಾಗಿದೆ.
ಬಲೆಗೆ ಬಿದ್ದವರು
ವಿರೇಶ ಹಿರೇಮಠ
ಉಪ ವಿದ್ಯುತ್ ಪರಿವೀಕ್ಷಕ ಜೆಸ್ಕಾಂ
ಯಾದಗಿರಿ
ಸತೀಶ್ ಎಎಇ, ಪಿಡಬ್ಲ್ಯೂಡಿ ಗದಗ
ಎಂ.ಕೆ. ಸುರಕೋಡ್ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ – ಗದಗ
ಆಸೀಫ್ ಇಕ್ಬಾಲ್ ಹುಸೇನ್ ಎಎಇ, ನಗರ ನೀರು ಸರಬರಾಜು ಮಂಡಳಿ- ಮೈಸೂರು ಶಶಿಧರ್ ಸಿಇಒ, ರೈತ ಸೇವಾ ಸಹಕಾರ ಸಂಘ, ಯಲಹಂಕ
ಹೆಚ್.ಸಿ. ಇಂದ್ರೇಶ್ ಸಹಾಯಕ ಪ್ರಾಧ್ಯಾಪಕ, ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ ಬೆಂಗಳೂರು
ದಾಳಿ ವೇಳೆ ಹಾವು
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್ ಡಿಸಿಎಲ್ ) ಮುಖ್ಯ ಎಂಜಿನಿಯರ್ ವಸಂತ ವಾಲಪ್ಪ ನಾಯಕ್ ಅವರ ಬಾಗಲಕೋಟೆಯ ಪೋಸ್ಟಲ್ ಕಾಲೋನಿಯ ಸಹೋದರ ಎಎಸ್‌ಐ ಭೀಮಸಿಂಗ್ ನಾಯಕ್ ಮನೆಯ ಮೇಲೆ ದಾಳಿ ದಾಳಿ ನಡೆಸಿದಾಗ ನೆಲಮಹಡಿಯಲ್ಲಿ ಹಾವು ಕಾಣಿಸಿಕೊಂಡಿದೆ.
ತಕ್ಷಣವೇ ಹಾವು ಹಿಡಿಯುವವರನ್ನು ಕರೆಸಿ ಹಾವು ಹಿಡಿದುಕೊಂಡು ಹೋದ ಬಳಿಕ ಶೋಧ ನಡೆಸಲಾಗಿದೆ.
ಸತಾಯಿಸಿದ ಅಧಿಕಾರಿಗೆ ಶಾಕ್
ಹಾಸನ ಮಹಾನಗರ ಪಾಲಿಕೆಯ ಎಎಇ ಸತ್ಯನಾರಾಯಣ ಅವರ ರವೀಂದ್ರನಗರದ ನಿವಾಸದ ಮೇಲೆ ದಾಳಿ ನಡೆಸಲು ಮುಂಜಾನೆ ೫:೩೦ರ ವೇಳೆ ಲೊಕಾ ಅಧಿಕಾರಿಗಳು ಧಾವಿಸಿದಾಗ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಾಗಿಲು ತೆರೆಯದೆ ಸತಾಯಿಸಲಾಗಿದೆ.
ಅಧಿಕಾರಿಗಳು ಮನೆ ಬೆಲ್ ಮಾಡಿ ಸೂಚನೆ ನೀಡಿದರೂ, ಮನೆಯೊಳಗಿನಿಂದ ಯಾರೂ ಪ್ರತಿಕ್ರಿಯಿಸದೇ ಬಾಗಿಲು ತೆರೆಯಲಿಲ್ಲ, ಮನೆಯಲ್ಲಿ ಲೈಟ್ ಆನ್ ಆಗಿ ಬಳಿಕ ಆಫ್ ಆದರೆ ಎಸಿ ಕೂಡ ಆನ್ ಆಗಿ ಆಫ್ ಆಗಿದೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಚಾಣಾಕ್ಷತನ ಮೆರೆದ ಅಧಿಕಾರಿಗಳು ಠಾಣೆಯ ಜೀಪ್ ಅನ್ನು ಮನೆಯ ಗೋಡೆಗೆ ಅಂಟಿಸಿ ನಿಲ್ಲಿಸಿ, ಅದರ ಮೇಲೆ ಹತ್ತಿ ಮೊದಲ ಮಹಡಿಯ ಮೂಲಕ ಮನೆಯೊಳಗೆ ಪ್ರವೇಶಿಸಿ ಸತ್ಯನಾರಾಯಣ ಅವರಿಗೆ ಶಾಕ್ ನೀಡಿದ್ದಾರೆ



























