
ನವಲಗುಂದ,ಮಾ.೨೮: ತಾಲ್ಲೂಕಿನ ಯಮನೂರ ಗ್ರಾಮದ ಗೌಡ್ರ ಓಣಿಯಲ್ಲಿರುವ ಅಂದಾನಪ್ಪ ಪಕ್ಕೀರಪ್ಪ ಯಕ್ಕುಂಡಿ ಯವರ ಹಿತ್ತಲಿನಲ್ಲಿರುವ ತೆಂಗಿನಮರಕ್ಕೆ ಸಿಡಿಲು ಬಡೆದು ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅಗ್ನಿಶಾಮಕ ಠಾಣಾಧಿಕಾರಿಗೆ ಕರೆ ಮಾಡಿ ಹೇಳಿದರು ಯಾರು ಕೂಡ ಆಗಮಿಸದ ಕಾರಣ ಗ್ರಾಮಸ್ಥರು ಅನಿವಾರ್ಯವಾಗಿ ತಾವೇ ನೀರು ಬೆಂಕಿ ನಂದಿಸಿದ್ದಾರೆ.
ಮರಕ್ಕೆ ತಗುಲಿದ ಬೆಂಕಿ ನಂದಿಸದಿದ್ದಲ್ಲಿ ಪಕ್ಕದಲ್ಲಿರುವ ಮೇವು ಹಾಗೂ ಹೊಟ್ಟಿನ ಬಣವಿಗೆ ಆವರಿಸುವ ಸಾಧ್ಯತೆ ಇತ್ತು ನವಲಗುಂದ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ಇಲ್ಲದೆ ಇರುವುದಕ್ಕೆ ಅಂದಾನಪ್ಪ ಯಕ್ಕುಂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



























