Home ಜಿಲ್ಲೆ ಧರ್ಮ ಮಾರ್ಗದಿಂದ ಮುಕ್ತಿ ಸಾಧ್ಯ

ಧರ್ಮ ಮಾರ್ಗದಿಂದ ಮುಕ್ತಿ ಸಾಧ್ಯ

ಬೀದರ್: ಏ.4:ಧರ್ಮ ಮಾರ್ಗದಲ್ಲಿ ಸಾಗುವುದರಿಂದ ಜೀವನ ಮುಕ್ತಿ ಹೊಂದಲು ಸಾಧ್ಯವಿದೆ ಎಂದು ಆಣದೂರಿನ ಭಂತೆ ಜ್ಞಾನಸಾಗರ್ ಹೇಳಿದರು.
ತಾಲ್ಲೂಕಿನ ಅಲಿಯಂಬರ್ ಗ್ರಾಮದ ತಕ್ಷಶೀಲ ಬುದ್ಧ ವಿಹಾರದಲ್ಲಿ ಚೈತ್ರ ಪೂರ್ಣಿಮೆ ನಿಮಿತ್ತ ಗುರುವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೌತಮ ಬುದ್ಧರ ತತ್ವ, ಆದರ್ಶಗಳು ಶ್ರೇಷ್ಠವಾಗಿವೆ. ಅಂತೆಯೇ ಮಹಾ ಜ್ಞಾನಿ ಆಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂದು ತಿಳಿಸಿದರು.
ಗೌತಮ ಬುದ್ಧರ ತತ್ವಗಳ ಅನುಕರಣೆಯಿಂದ ವಿಶ್ವದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಗೊಳ್ಳಲಿದೆ ಎಂದು ಹೇಳಿದರು.
ಗೌತಮ ಬುದ್ಧರ ತತ್ವಗಳನ್ನು ಎಲ್ಲರೂ ಪಾಲಿಸಬೇಕು. ಮೂಢ ಆಚರಣೆಗಳಿಂದ ದೂರ ಇರಬೇಕು ಎಂದು ಸಲಹೆ ಮಾಡಿದರು.
ಆಣದೂರಿನ ಭಂತೆ ಧಮ್ಮಾನಂದ ಮಹಾ ಥೆರೋ ಕಾರ್ಯಕ್ರಮ ಉದ್ಘಾಟಿಸಿದರು. ಭಂತೆ ಕರುಣಾನಂದ, ಭಂತೆ ಸಂಘಸೇವಕ, ಮಾತೆ ಅರ್ಚಸ್ಮತಿ, ಪ್ರಮುಖರಾದ ವೀರಶೆಟ್ಟಿ ಕಟ್ಟೆ, ಸಂತೋಷ್ ಪಡಸಲೆ, ಸಂಗಮೇಶ ಬಾವಿದೊಡ್ಡಿ, ಧಮೇರ್ಂದ್ರ ಯರನಳ್ಳಿ, ಶಂಕರ ಚೊಂಡಿ, ತುಕಾರಾಮ ಜನವಾಡ, ರಾಜಕುಮಾರ ಹಾಲಹಿಪ್ಪರ್ಗೆ, ರಮೇಶ ಬಾವಿದೊಡ್ಡಿ, ರಾಜಕುಮಾರ ಬಾವಿದೊಡ್ಡಿ, ಬೌದ್ಧ ಉಪಾಸಕ, ಉಪಾಸಕಿಯರು ಇದ್ದರು.