Home ಜಿಲ್ಲೆ ಬೆಂಗಳೂರು ವಿಜ್ಞಾನದ ಅರಿವು ಜನಸಾಮಾನ್ಯರಿಗೂ ತಲುಪಲಿ

ವಿಜ್ಞಾನದ ಅರಿವು ಜನಸಾಮಾನ್ಯರಿಗೂ ತಲುಪಲಿ

ಕೋಲಾರ ಮಾ, ೩೧- ಗ್ರಾಮೀಣ ಪ್ರದೇಶದಲ್ಲಿ ಜ್ಞಾನ, ವಿಜ್ಞಾನದ ಅರಿವು ಮೂಡಿಸಲು ಸತತ ಪ್ರಯತ್ನ ಆಗಬೇಕು. ಇದಕ್ಕಾಗಿ ವಿವಿಧ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದ್ದು ಈ ಮೂಲಕ ಸಮಾಜದಲ್ಲಿ ಇರುವ ಅಂದ ಶ್ರದ್ಧೆ ನಿವಾರಣೆ ಮಾಡಲು ಶ್ರಮಿಸಬೇಕಾಗಿದೆ ಎಂದು ವಿಜ್ಞಾನ ಹಾಗೂ ಪರಿಸರ ಚಿಂತಕರಾದ ಹೆಚ್.ಎ. ಪುರುಷತ್ತಮರಾವ್ ಅಭಿಪ್ರಾಯಪಟ್ಟರು.


ಅಂತರಗಂಗೆ ರಸ್ತೆಯಲ್ಲಿನ ಮುನೇಶ್ವರ ನಗರದ ತಮ್ಮ ಗೃಹ ಕಚೇರಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಜಿಲ್ಲಾ ಸಮಿತಿ ಏರ್ಪಡಿಸಿದ ಸದಸ್ಯತ್ವ ಆಂದೋಲನ ಕಾರ್ಯಕ್ರಮದಲ್ಲಿ ಸ್ವತ: ಸದಸ್ಯರಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ದಿನೇ ದಿನೇ ಬೆಳೆಯುತ್ತಿರುವ ಇಂದಿನ ಸಮಾಜದಲ್ಲಿ ಕೇವಲ ಪರಿಸರ ಸಂರಕ್ಷಣೆ ಅಲ್ಲದೆ ಆರೋಗ್ಯ ಸ್ವಚ್ಛತೆ ಕುರಿತು ಜನಜಾಗೃತಿ ಉಂಟುಮಾಡಲು ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.


ಶಾಲಾ ಶಿಕ್ಷಣ ಇಲಾಖೆ ನಿವೃತ್ತ ಶಿಕ್ಷಣಾಧಿಕಾರಿ ಸಿ ಆರ್ ಅಶೋಕ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ – ಮತ್ತು ಪ್ರಾಯೋಗಿಕ ಜ್ಞಾನದ ಅರಿವು ನೀಡುವುದು ಈ ಮೂಲಕ ತಮ್ಮಲ್ಲಿರುವ ಮೂಡನಂಬಿಕೆಗಳಿಂದ ಹೊರಬರಲು ಪ್ರತಿಯೊಬ್ಬ ವಿದ್ಯಾವಂತ ಜನರು ಸಮಿತಿಯ ಸದಸ್ಯರಾಗಬೇಕು ಎಂದರು.


ಈಗಾಗಲೇ ಸದಸ್ಯರಾಗಿದ್ದರೂ, ಈ ವಷದ ವಾರ್ಷಿಕ ಸದಸ್ಯತ್ವವನ್ನು ಆಯಾ ತಾಲೂಕು ಪ್ರತಿನಿಧಿಗಳ ಮೂಲಕ ಪಡೆದುಕೊಂಡು ಈ ಮೂಲಕ ವಿಜ್ಞಾನ ಜಾಗೃತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ತಿಳಿಸಿದರು.


ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಮುಖಂಡ ಕೆ.ವಿ. ಜಗನ್ನಾಥ್, ಜಿಲ್ಲಾ ಕಾರ್ಯದರ್ಶಿ ವಿ.ಮಂಜುಳಾ, ಉಪನ್ಯಾಸಕ ಶ್ರೀನಿವಾಸ ಪ್ರಸಾದ್, ಧನಲಕ್ಷ್ಮಿ ಪುರುಷತ್ತಮರಾವ್, ನಾರಾಯಣಸ್ವಾಮಿ, ರಾಜೇಶ್, ಶ್ರೀನಿವಾಸ್, ಗಣೇಶ್, ಚಂದ್ರಪ್ಪ ಉಪಸ್ಥಿತರಿದ್ದರು.