
ಕಮಲನಗರ:ಮಾ.3: ಪ್ರತಿಯೊಬ್ಬರೂ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ಸಂಚಾರಿ ನ್ಯಾಯಾಲಯ, ಕಮಲನಗರ ನ್ಯಾಯಧೀಶರಾದ ವಿನಾಯಕ ವಾನಖೇಡೆ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಪೆÇಲೀಸ್ ಠಾಣೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ, ಜಿಲ್ಲಾ ಪೆÇಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈಚೆಗೆ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಪಡೆದಾಗ ಕಾನೂನಿನ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದರು.
ಪಿಎಸ್‍ಐ ಆಶಾ ರಾಠೋಡ್ ಮಾತನಾಡಿ, ಪ್ರತಿನಿತ್ಯ ಅಪಘಾತ ಪ್ರಕರಣಗಳು ಕಡಿಮೆಗೊಳಿಸಬೇಕಾದರೇ, ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ತಿಳಿದು ತಮ್ಮ ಪೆÇೀಷಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ಔರಾದನ ಸರ್ಕಾರಿ ವಕೀಲ ಶಿವರಾಜ ಶೇಟಕಾರ ಮಾತನಾಡಿ, ಹುಟ್ಟಿದ ಕ್ಷಣದಿಂದಲೂ ಹಕ್ಕುಗಳು ಅನ್ವಯವಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಪ್ರೀಯಂಕಾ ಮೇತ್ರೆ(ಕೋಟೆ), ಭೀಮರಾವ ಗಾಯಕವಾಡ್, ಸುರೇಶ, ಪೆÇಳಿಸ್ ಸಿಬ್ಬಂದಿ ಎಎಸ್‍ಐ ವಸಂತ, ಲೋಕೇಶ, ಶಿವಾನಂದ, ಸತೀಷ, ಸಂತೋಷ, ದಶರಥ, ಮಲ್ಲಿಕಾರ್ಜುನ, ವೈಜನಾಥ, ರಾಜಕುಮಾರ ಸೋನಾಋಎ, ಅಂಕುಶ ಭವರಾ ಸೇರಿದಂತೆ ಶರಣಬಸಪ್ಪ ಪಬ್ಲಿಕ್ ಶಾಲೆ, ಡಾ| ಚನ್ನಬಸವ ಪ್ರೌಢ ಶಾಲೆ ಮತ್ತು ಭಾಗಿರಥಿ ಪಬ್ಲಿಕ್ ಶಾಲೆ ಸಿಬ್ಬಂದಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.



























