
ಬೀದರ, ಮಾ.೨೬: ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತುಗಳು ಮತ್ತು ಆಸಿಡ್ ದಾಳಿಯ ಬಲಿಪಶುಗಳ ಯೋಜನೆ ೨೦೨೬ (ಗಿiಛಿಣims oಜಿ ಂಛಿiಜ ಂಣಣಚಿಛಿಞ Sಛಿheme ೨೦೧೬) ಬಗ್ಗೆ ತಿಳಿಸಿದರು.
ಅವರು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಪಂಚಾಯತ, ಮತ್ತು ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಮನ್ನಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ ಹಾಗೂ ಓಂಐSA ಐegಚಿಟ Seಡಿviಛಿes ಣo ಗಿiಛಿಣims oಜಿ ಂಛಿiಜ ಂಣಣಚಿಛಿಞ Sಛಿheme ೨೦೧೬ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೀದರ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸನ್ಮುಖಯ್ಯಾ ಬಿ . ಸ್ವಾಮಿ ಅವರು ಸಮಾಜದಲ್ಲಿ ಜನರು ನೀರನ ಬಳಕೆ ಮತ್ತು ಮಹತ್ವ ಕುರಿತು ಮಾತನಾಡಿದರು. ಉಪನ್ಯಾಸಕರಾಗಿ ಬೀದರ ವಕೀಲ ಜಗನಾಥ ಸೊರಳ್ಳಿ ವಿಶ್ವ ಜಲ ದಿನ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬೀದರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಜೆ.ಇ. ತಿಪ್ಪೇಶಕುಮಾರ, ಬೀದರ ಜಲ ಜೀವನ ಮಿಷನ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪೆತ್ರು.ಜೆ ಸೇರಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಮನ್ನಳ್ಳಿ ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಸ್ಥಿತರಿದ್ದರು. ಮನ್ನಳ್ಳಿ ಗ್ರಾಮ ಪಂಚಾಯತ ಪಿಡಿಓ ಕನಕರಾಯ ಎಲ್ಲರನ್ನು ಸ್ವಾಗತಿಸಿದರು.




























