
ಕಲಬುರಗಿ :ಮಾ.28: ಎಚ್‍ಕೆಇ ಸೊಸೈಟಿಯ ಎಸ್. ನಿಜಲಿಂಗಪ್ಪ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಅಂಡ್ ರಿಸರ್ಚ್ ಕಾಲೇಜಿನಲ್ಲಿ ಸಂಸ್ಥೆಯ ಆಂತರಿಕ ಗುಣಮಟ್ಟ ಭರವಸೆ ಘಟಕ (Iಕಿಂಅ) ಹಾಗೂ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ “ದಂತ ಚಿಕಿತ್ಸೆಯಲ್ಲಿ ಸೋಂಕು ತಡೆ ಮತ್ತು ನಿಯಂತ್ರಣ” ವಿಷಯದ ಕುರಿತು ಎರಡು ದಿನಗಳ ಉಪನ್ಯಾಸ ಹಾಗೂ ಕಾರ್ಯಾಗಾರವನ್ನು ಎಚ್‍ಕೆಇ ಸೊಸೈಟಿಯ ಗವನಿರ್ಂಗ್ ಕೌನ್ಸಿಲ್ ಸದಸ್ಯರಾದ ಡಾ. ಕಿರಣ ದೇಶಮುಖ ಹಾಗೂ ನಿಶಾಂತ ಜಿ. ಯೆಲಿ ಅವರು ಉದ್ಘಾಟಿಸಿದರು. ಡಾ. ಕಿರಣ ದೇಶಮುಖ ಅವರು ಮಾತನಾಡಿ ಆರೋಗ್ಯ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಸೋಂಕು ನಿಯಂತ್ರಣ ಕ್ರಮಗಳ ಮಹತ್ವವನ್ನು ಒತ್ತಿ ಹೇಳಿದರು.
ಡಾ. ಶಿಲ್ಪಾ ಪ್ರಧಾನ್ ಅವರು ಸೋಂಕು ನಿಯಂತ್ರಣದ ಪ್ರಮುಖ ವಿಧಾನಗಳ ಕುರಿತು ತಜ್ಞ ಉಪನ್ಯಾಸಗಳನ್ನು ನೀಡಿದರು. ಜೊತೆಗೆ ಪ್ರಾಯೋಗಿಕ ತರಬೇತಿಗಳ ಮೂಲಕ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ವಿವರಿಸಿದರು.
ಪ್ರಾಂಶುಪಾಲರಾದ ಡಾ. ಜಯಶ್ರೀ ಮುದ್ದಾ ಹಾಗೂ ಉಪಪ್ರಾಂಶುಪಾಲರಾದ ಡಾ. ವೀರೇಂದ್ರ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಆಯೋಜನಾ ತಂಡದಲ್ಲಿ ಡಾ. ಪ್ರಶಾಂತಕುಮಾರ್, ಡಾ. ಪಲ್ಲವಿ ದೇಶಮುಖ, ಡಾ. ಅರವಿಂದ ಮೊಲ್ಡಿ, ಡಾ. ಉಮೇಶ್ ಅಲ್ಲಾಡ್ ಅವರು ಭಾಗವಹಿಸಿದ್ದರು.
ಮೊದಲ ದಿನದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರೆ, ಎರಡನೇ ದಿನವನ್ನು ಬೋಧಕೇತರ ಸಿಬ್ಬಂದಿಗೆ ವಿಶೇಷ ತರಬೇತಿಗೆ ಮೀಸಲಿಡಲಾಯಿತು.
ಒಟ್ಟು 340 ಮಂದಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಗೂ 80 ಮಂದಿ ಬೋಧಕೇತರ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.



























