ಹದಿನೆಂಟು ನಾಮಪತ್ರ ಸಲ್ಲಿಕೆನಾಮಪತ್ರ ಸಲ್ಲಿಸಲು ಅ. ೨೭ ಕಡೆ ದಿನ

sಸಂಜೆವಾಣಿ ವಾರ್ತೆ,
ವಿಜಯಪುರ,ಅ.೨೫: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಗೆ ಸ್ಪರ್ಧೆ ಕೋರಿ ಶುಕ್ರವಾರ ಒಟ್ಟು ೧೮ ನಾಮಪತ್ರಗಳು ಸಲ್ಲಿಕೆಯಾಗಿವೆ.
ರಾಜ್ಯ ಕಾರ್ಯಕಾರಿಣಿ ಸ್ಥಾನಕ್ಕೆ ಎರಡು, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಒಂದು, ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಮೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಒಂದು, ಖಜಾಂಚಿ ಸ್ಥಾನಕ್ಕೆ ಒಂದು, ಕಾರ್ಯದರ್ಶಿ ಸ್ಥಾನಕ್ಕೆ ಎರಡು, ಜಿಲ್ಲಾ ಕಾರ್ಯಕಾರಿಣಿ ಸ್ಥಾನಕ್ಕೆ ಎಂಟು ಸೇರಿದಂತೆ ಒಟ್ಟು ಹದಿನೆಂಟು ನಾಮಪತ್ರ ಸಲ್ಲಿಸಿದ್ದಾರೆಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅ. ೨೭ ಮಧ್ಯಾಹ್ನ ೩ ಗಂಟೆ ವರೆಗೆ ಮಾತ್ರ ಕಾಲಾವಕಾಶ ಇರುತ್ತದೆ. ೨೮ ರಂದು ನಾಮಪತ್ರ ಪರಿಶೀಲನೆ, ೩೦ರಂದು ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಇದೆ. ನವೆಂಬರ್ ೯ ರಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೩ ಗಂಟೆ ವರೆಗೆ ಮತದಾನ ನಡೆಯಲಿದೆ. ಅಂದೆ ಮಧ್ಯಾಹ್ನ ೩-೩೦ ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಲಗೊಂಡ ತಿಳಿಸಿದ್ದಾರೆ.