
ಕಲಬುರಗಿ,ಆ.31-ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ನಗರದ ಸಂತ ಜೋಸೆಫ ಪಿ. ಯು ಕಾಲೇಜು ಸಹಯೋಗದಲ್ಲಿ ” ನನ್ನ ನೆಚ್ಚಿನ ಪುಸ್ತಕ ಓದು”-ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಂತ ಜೋಸೆಫ್
ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಸಿಸ್ಟರ್ ಶರಣಲತಾ ಶಶಿಗೆ ಅವರು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ, ಕನ್ನಡ ಪುಸ್ತಕ ಪ್ರಾಧಿಕಾರ ನಾಡಿನಾದ್ಯಂತ ವಿದ್ಯಾರ್ಥಿಗಳಿಗೆ ನಾಡು-ನುಡಿ, ದೇಶಭಕ್ತಿ ಬೆಳಸಿ ಕೊಳ್ಳುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.
ಪ್ರಾಸ್ತವಿಕವಾಗಿ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್. ನಿರಗುಡಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕಲಬುರಗಿ ವಿಭಾಗದಲ್ಲಿ ವಿವಿಧ ಕಾಲೇಜುಗಳಲ್ಲಿ ಪ್ರಬಂಧಸ್ಪಧೆರ್É, ರಸಪ್ರಶ್ನೆ, ವಿಶೇಷ ಉಪನ್ಯಾಸ, ವಿಚಾರ ಸಂಕಿರಣ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬರಲಾಗುತ್ತಿದೆಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶ್ರೀಗುರು ಪಿ.ಯು ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ.ಶಂಕರ ಬಾಳಿ ಅವರು, “ರಾಷ್ಟ್ರಕವಿ ಕುವೆಂಪು ಅವರು ಯುಗದ ಕವಿಯಾಗಿ, ಜಗದ ಕವಿಯಾಗಿ, ವಿಶ್ವಮಾನವರಾಗಿ ಕನ್ನಡದ ಶ್ರೇಷ್ಠತೆಯನ್ನು ಹೆಚ್ಚಿಸಿದ್ದಾರೆ, ಕುವೆಂಪು ಅವರು ಮಹಾಕಾವ್ಯ, ನಾಟಕಗಳು ಕಥೆ, ಕಾದಂಬರಿ, ಸಂಶೋಧನೆ, ವಿಮರ್ಶೆ, ಶಿಶು ಸಾಹಿತ್ಯ, ಜೀವನ ಚರಿತ್ರೆ, ಸಂಪಾದನೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿಕೊಟ್ಟಿದ್ದಾರೆ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ, ಮಲೆಗಳಲ್ಲಿ ಮದುಮಗಳು ಮಹಾಕಾದಂಬರಿ ಇವೆರಡು ಬೃಹತ್ ಗ್ರಂಥಗಳಾಗಿವೆ. ಕುವೆಂಪು ಅವರದು ವಿಚಾರಶೀಲ ವ್ಯಕ್ತಿತ್ವ ನಾಡು-ನುಡಿ, ರಾಷ್ಟ್ರಭಕ್ತಿ ಹಾಗೂ ಕನ್ನಡಿಗರನ್ನು ಸದಾ ಎಚ್ಚರಿಸುವ ಮತ್ತು ಸ್ಫೂರ್ತಿ ನೀಡುವ ಕವನಗಳನ್ನು ರಚಿಸಿದ್ದಾರೆ-ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡಗನಾಗಿರು, ಬಾರಿಸು ಕನ್ನಡ ಡಿಂಡಿಂಮವ ಓ ಕರ್ನಾಟಕ ಹೃದಯಶಿವ ! ಅವರ ಕವನವು ಪ್ರತಿಯೊಬ್ಬ ಕನ್ನಡಿಗರಲ್ಲಿ ಜಾಗೃತೆ ಮೂಡಿಸುತ್ತದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಕುರಿತು ಅವರು ಹೇಳುವ ರೀತಿ-ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ-ಸಿಲುಕದಿರಿ ಮತವೆಂಬ ಮೋಹದ ಜಾಲಕ್ಕೆ ಎಂದು ಹೇಳಿ ದೇಶದ ಜನರಿಗೆ ಜಾತಿ, ಮೂಢನಂಬಿಕೆಯಿಂದ ಹೊರಬರಲು ಕರೆ ನೀಡುತ್ತಾರೆ” ಎಂದರು. ಅತಿಥಿಗಳಾದ ಡಾ.ವಿಜಯಕುಮಾರ ಪÀುರುತೆ ಕಾರ್ಯಕ್ರಮದಲ್ಲಿ ಮಾತನಾಡಿದರು .
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಉಪಪ್ರಾಚಾರ್ಯ ಡಾ.ಚಿ.ಸಿ.ನಿಂಗಣ್ಣ ಮಾತನಾಡುತ್ತ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಗಳ ಬಗ್ಗೆ ಹರ್ಷವ್ಯಕ್ತಪಡಿಸಿ, ರಾಷ್ಟ್ರಕವಿ ಕುವೆಂಪು ಅವರು ಕನ್ನಡದ ಮುಖಾಂತರ
ವಿಶ್ವಮಾನವರಾಗಿ ಬೆಳೆದಿರುವುದು ಕನ್ನಡ ಕುಲಕೋಟಿಗೆ ಹೆಮ್ಮೆಯ ಸಂಗತಿ, ಅವರ ಯುಗದವಾಣಿ “ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು” ಇಂದಿನ ಪ್ರಜಾಪ್ರಭುತ್ವದಲ್ಲಿನ ಅವ್ಯವಸ್ಥೆಯನ್ನೇ ಪ್ರಶ್ನಿಸವಂತಿದೆ , ಕೆವೆಂಪು ವಿಶ್ವದ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದರು. ಆರಂಭÀದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಾನಾಗೀತೆ ನಡೆಸಿಕೊಟ್ಟರು, ಉಪನ್ಯಾಸಕಿ ಅಶ್ವಿನಿ ಕೆ. ಸ್ವಾಗತಿಸಿದರು, ವಿದ್ಯಾ ಕುಲಕರ್ಣಿ
ನಿರೂಪಿಸಿದರು. ಕೊನೆಗೆ ಡಾ.ನಾಗಮ್ಮ ಹೊಸಮನಿ ಒಂದಿಸಿದರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಉಪನ್ಯಾಸಕರು ಭಾಗಿಯಾಗಿದ್ದರು.