
ಕಲಬುರಗಿ,ಫೆ.21: ಇಂದಿನ ಆಧುನಿಕತಂತ್ರಜ್ಞಾನದಯುಗದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಕೌಶಲ್ಯಆಧಾರಿತ ಮಾರ್ಕೆಟಿಂಗ್ ಹಾಗೂ ಈ ಕುರಿತಾದ ತಂತ್ರಗಳ ಜ್ಞಾನದತರಬೇತಿ ಪಡೆಯುವಅಗತ್ಯ ಹಿಂದೆಂದಿಗಿಂತಲೂ ಈಗ ಮುಖ್ಯವಾಗಿದೆ ಎಂದು ಸಿ ಯು ಕೆ ಕುಲಪತಿ ಪೆÇ್ರ ಬಟ್ಟು ಸತ್ಯನಾರಾಯಣ ಹೇಳಿದರು.
ಕಡಗಂಚಿ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ “ದಕ್ಷಿಣ ಭಾರತದಲ್ಲಿ ಟಿವಿ ಮಾಧ್ಯಮ ಮತ್ತು ಚಲನಚಿತ್ರ ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ತಂತ್ರಗಳು ” ಕುರಿತುಒಂದು ದಿನದಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದಅವರು, ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಾದಂತೆ ಹೊಸ ಹಾಗೂ ವಿಭಿನ್ನರೀತಿಯ ಕೌಶಲ್ಯಗಳನ್ನು ತಂತ್ರಗಳ ವಿಧಾನಗಳನ್ನು ಅಳವಡಿಸಿಕೊಂಡು ಪತ್ರಿಕೋದ್ಯಮದ ಸ್ಪರ್ಧಾತ್ಮಕಜಗತ್ತಿಗೆ ವಿದ್ಯಾರ್ಥಿಗಳನ್ನು ಸಿ ಯು ಕೆ ಅಣಿಗೊಳಿಸುತ್ತಿರುವುದು ಗಮನಾರ್ಹ ಅಂಶ ಎಂದು ಶ್ಲಾಘಿಸಿದರು. ಇತ್ತೀಚೆಗೆ ಪ್ರಿಂಟ್ ಮಾಧ್ಯಮಕ್ಕಿಂತಲೂಇತ್ತೀಚಿನಜನರೇಷನ್ ಬದಲಾದಂತೆ ಆಸಕ್ತಿಗಳಲ್ಲಿಯೂ ಬದಲಾವಣೆ ಬಂದಿದೆ.ಸಾಮಾಜಿಕ ಮಾಧ್ಯಮಗಳು ಅತಿ ಶೀಘ್ರ ಹಾಗೂ ಬಹಳ ಮಾಹಿತಿ ನೀಡುತ್ತಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ಕಡೆ ಆಸಕ್ತಿ ತೋರಿಸುತ್ತಿದ್ದಾರೆ.ಈಗ ಪ್ರತಿಯೊಂದಕ್ಕೂ ಮಾರ್ಕೆಟಿಂಗ್ ಮಾಡುವಯುಗಇದಾಗಿದ್ದು, ಅದರ ತಂತ್ರಗಳನ್ನ ಕಲಿತುಕೊಂಡುಜೀವನದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕೆಂದುಕರೆ ನೀಡಿದರು.
ನಂತರಕಾರ್ಯಗಾರ ನಡೆಸಿಕೊಟ್ಟು ಮಾತನಾಡಿದ ಕೇರಳದ ಜೀ ಚಾನೆಲ್ ನ ಮಾರುಕಟ್ಟೆ ಮುಖ್ಯಸ್ಥಡಾ ಶ್ರೀನಿವಾಸನ್ ಸುಬ್ರಮಣಿಯನ್ , ಮಾರುಕಟ್ಟೆ ವಿಧಾನಗಳು ಇಂದಿನ ಟಿವಿ ಮಾಧ್ಯಮಗಳಲ್ಲಿ ಸೇರಿದಂತೆ ಪ್ರತಿಯೊಂದುಕ್ಷೇತ್ರದಲ್ಲಿದಾಪುಗಾಲಿಡುತ್ತಿದೆ. ಹೀಗಾಗಿ ಅದರ ಮುಖ್ಯ ತಂತ್ರಗಳು ಹಾಗು ಜನಪ್ರಿಯ ಚಲನಚಿತ್ರ ಪ್ರವೃತ್ತಿಗಳ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದ ಅಗತ್ಯವಿದೆಎಂದು ಪ್ರತಿಪಾದಿಸಿದರು.
ವೇದಿಕೆಮೇಲೆ ಕುಲಪತಿ ಪೆÇ್ರ ಬಟ್ಟು ಸತ್ಯನಾರಾಯಣ, ಕಾನೂನು ನಿಕಾಯದ ಮುಖ್ಯಸ್ಥರಾದ ಪೆÇ್ರ ಬಸವರಾಜ್‍ಕುಬಕಡ್ಡಿ, ಪತ್ರಿಕೋದ್ಯಮ ನಿಕಾಯದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಚಾಲಕಿ ಡಾ ಶಾಮಲಾ ರಾಮಪ್ಪ, ಮುಖ್ಯಅತಿಥಿ ಹಾಗೂ ಶಿಬಿರದ ತರಬೇತುದಾರಡಾ ಶ್ರೀನಿವಾಸನ್ ಸುಬ್ರಮಣಿ, ಉಪಸ್ಥಿತರಿದ್ದರು.ಡಾಒಯಿನಮ್ ಬೇದಜಿತ್ ಸ್ವಾಗತಿಸಿದರು. ಡಾಕಾರ್ತಿಕ್‍ಅತಿಥಿ ಪರಿಚಯ ಮಾಡಿದರು. ಡಾ ದೀಪ್ತಿ ವಂದಿಸಿದರು. ವಿದ್ಯಾರ್ಥಿನಿ ಸುರಕ್ಷಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತರಬೇತಿಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
























