Home ಜಿಲ್ಲೆ ಕಲಬುರಗಿ ಜ್ಞಾನ ಕತ್ತಲೆಯನ್ನು ದೂರ ಮಾಡುತ್ತದೆ: ಪ್ರೊ, ದಶರಥ ನಾಯಕ್

ಜ್ಞಾನ ಕತ್ತಲೆಯನ್ನು ದೂರ ಮಾಡುತ್ತದೆ: ಪ್ರೊ, ದಶರಥ ನಾಯಕ್

ಕಲಬುರಗಿ:ಮಾ.7:ಜ್ಞಾನವು ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಬೆಳಕು ನೀಡುತ್ತದೆ. ಅನುಭವ, ಶಿಕ್ಷಣ ಮತ್ತು ವಿವೇಚನೆಯಿಂದ ಗಳಿಸಿರುವ ಜ್ಞಾನ ಜೀವನದೂದ್ದಕ್ಕು ಜೊತೆಗೆ ಇರುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಮತ್ತು ಸಮಾಜ ವಿಜ್ಞಾನ ನಿಕಾಯದ ಡೀನರಾದ ಪೆÇ್ರ, ದಶರಥ ನಾಯಕ್ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಬರೀ ಸರ್ಟಿಫಿಕೇಟ್ ತಗೊಂಡಿ ಹೋಗುವ ಬದಲಾಗಿ ಜ್ಞಾನದ ಬುತ್ತಿಯನ್ನು ತೆಗೆದುಕೊಂಡು ಹೋಗಬೇಕು. ವಿದ್ಯಾರ್ಥಿಗಳು ಹೊಸ ಸನ್ನಿವೇಶಗಳು ಮತ್ತು ಸವಾಲುಗಳನ್ನು ಎದುರಿಸಲು ವೈಯಕ್ತಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯನ್ನು ಜನಸಮೂಹವು ಸಮಾಜದಲ್ಲಿ ಅವರನ್ನು ಗುರುತಿಸುತ್ತದೆ.
ಇತಿಹಾಸವು ಕೇವಲ ಗತಕಾಲದ ಕಥೆಯಲ್ಲ, ಬದಲಾಗಿ ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯವನ್ನು ರೂಪಿಸಲು ಅಗತ್ಯವಾದ ಅರಿವು ಆಗಿದೆ. ವಿಶ್ವವಿದ್ಯಾಲಯದಲ್ಲಿನ ಓದು ನಿಮ್ಮ ವಿಮರ್ಶಾತ್ಮಕ ಚಿಂತನೆ, ಸಂಶೋಧನಾ ಕೌಶಲ ಮತ್ತು ಸಂಸ್ಕøತಿಯ ಜ್ಞಾನವನ್ನು ವಿಸ್ತರಿಸಲಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಕೆಎಎಸ್ ಅಧಿಕಾರಿ ದಿವಾಕರ್ ಎಸ್ ಮಾತನಾಡಿ ಇತಿಹಾಸ ಮಾನವನಿಗೆ ಮಾನವೀಯತೆಯನ್ನು ಕಲಿಸಿಕೊಡುತ್ತದೆ. ದೇಶದಲ್ಲಿ ಮಹನೀಯರ ಇತಿಹಾಸವು ಓದಿದಾಗ ಸಂಪೂರ್ಣವಾದ ಇತಿಹಾಸವು ಅರ್ಥವಾಗುತ್ತದೆ. ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎಂದು ಛಲತೊಟ್ಟಾಗ ಯಶಸ್ಸು ಆಗಲು ಸಾಧ್ಯ ಎಂದು ಅವರು ಹೇಳಿದರು.

ಅತಿಥಿ ಉಪನ್ಯಾಸಕರಾದ ಡಾ. ರತ್ನಾಕರ್ ಹೊಸಮನಿ, ಕೃಷ್ಣ ಕಾಂತಿ, ಸುರೇಖಾ, ಪಾರ್ವತಿ ಗುಬ್ಬನ, ಹಣಮೇಶ, ಸಮೀರ್ ಸಿಂಧೆ ಇದ್ದರು. ಅಣವೀರಗೌಡ ಸುದಾಶ್ರೀ ಬಿಳವಾರ ನಿರೂಪಿಸಿದರು. ದಿಪೀಕಾ ಮಂದೋಲಕರ್ ರಾಚಯ್ಯ ಸ್ವಾಮಿ ವಂದಿಸಿದರು.

ವಿದ್ಯಾರ್ಥಿಗಳು ಓದು ಬರಹಕ್ಕೆ ಎಷ್ಟು ಪ್ರಾಮಾಣಿಕತೆ ಕೊಡುತ್ತಾರೆ ಅವರಲ್ಲಿ ಆಗ ಆತ್ಮವಿಶ್ವಾಸವನ್ನು ಹೆಚ್ಚಾಗುತ್ತದೆ. ತಾಳ್ಮೆ ಮತ್ತು ಸ್ವಯಂ ಶಿಸ್ತಿನಿಂದ ಕಂಡ ಕನಸು ನನಸಾಗುತ್ತದೆ.
ಪೆÇ್ರ, ದಶರಥ ನಾಯಕ್
ಸಂಯೋಜನಾಧಿಕಾರಿಗಳು
ಇತಿಹಾಸ ಅಧ್ಯಯನ ವಿಭಾಗ
ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ