Home ಜಿಲ್ಲೆ ಕಲಬುರಗಿ ಕೆಲ್ಲೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೆಲ್ಲೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ

ಜೇವರ್ಗಿ,ಏ.13-ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಕೆಲ್ಲೂರು ಗ್ರಾಮದಲ್ಲಿ ಕಾಲೇಜಿನ ಐಕ್ಯೂಏಸಿ ಕ್ರಾಸ್ ಘಟಕ ಹಾಗೂ ಕಲ್ಬುರ್ಗಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಗ್ರಾಮದ ಗ್ರಾಮಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಅರುಣ್ ಕುಮಾರ್ ಲೋಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತದಾನ ಸಮಿತಿಯ ಸಂಚಾಲಕ ಡಾ.ಸೈಯದ್ ಸನಾವುಲ್ಲಾ ಮಾತನಾಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಪ್ಪಯ್ಯ ಪತ್ತಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಮರಣ್ಣಗೌಡ ಉಪಸ್ಥಿತರಿದ್ದರು. ಡಾ. ಖುತೇಜಾ ನಸ್ರಿನ್ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ.ಖಾಜಾವಲಿ ಈಚನಾಳ ಪ್ರಾಸ್ತಾವಿಕ ಮಾತನಾಡಿದರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ ಶರಣಪ್ಪ ಗುಂಡಗುರ್ತಿ, ಕುಪೇಂದ್ರ ರಾಥೋಡ್, ಹಾಗೂ ಅಪರ್ಣ ಇನ್ನಿತರ ಅಧ್ಯಾಪಕರು ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಲ್ಬುರ್ಗಿಯ ಅಲ್ ಬದರ್ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ ಮತ್ತು ಜೇವರ್ಗಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು ಬಿಪಿ, ಮಧುಮೇಹ, ಕಣ್ಣು ಕಿವಿ, ಮೂಗು, ಗಂಟಲು ರೋಗ ತಜ್ಞರು ಹಾಗೂ ಮೂಳೆ, ಮಕ್ಕಳ ತಜ್ಞರು ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿ ಮಾತ್ರೆಗಳನ್ನು ವಿತರಿಸಿದರು.
180 ಕ್ಕೂ ಅಧಿಕ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಪೆÇ್ರ.ಭೀಮಣ್ಣ ನಿರೂಪಿಸಿದರೆ, ಡಾ.ಎನ್. ಜಿ. ಶ್ರೀಧರ್ ವಂದಿಸಿದರು.