Home ಜಿಲ್ಲೆ ಕಲಬುರಗಿ ಮಹಿಳಾ ಸಬಲೀಕರಣ ಪ್ರಕ್ರಿಯೆಯಲ್ಲಿ ಕಲಬುರಗಿ ಮಹಿಳೆಯರು ಎತ್ತಿದ ಕೈ:ಫೌಜಿಯಾ ತರನ್ನುಮ

ಮಹಿಳಾ ಸಬಲೀಕರಣ ಪ್ರಕ್ರಿಯೆಯಲ್ಲಿ ಕಲಬುರಗಿ ಮಹಿಳೆಯರು ಎತ್ತಿದ ಕೈ:ಫೌಜಿಯಾ ತರನ್ನುಮ

ಕಲಬುರಗಿ:ಏ.5:ಮಹಿಳಾ ಸಬಲೀಕರಣವು ಆರ್ಥಿಕ, ಸಾಮಾಜಿಕ, ರಾಜಕೀಯ ಮಹಿಳೆಯರಿಗೆ ಸಮಾನ ಅವಕಾಶ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ಹಕ್ಕುಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮಹಿಳೆಯರು ಮುಂದೆ ಇದ್ದಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಜಿಲ್ಲೆಯ ಅನೇಕ ಮಹೀಳಾ ಸಂಘಟನೆಗಳು ಕ್ರೀಯಾಶಿಲರಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ವಾರದಲ್ಲಿ ಎರಡು ಮೂರು ಮಹಿಳಾ ಸಂಘಟನೆಗಳು ಮಹಿಳಾ ಸಬಲೀಕರಣ ಮತ್ತು ಸಂಘಟನೆಯ ಕುರಿತು ಆಮಂತ್ರಣ ಪತ್ರ ಪತ್ರಿಕೆ ಕೊಡುತ್ತಿದ್ದಾರೆ ಎನ್ನುತ್ತಾ ಜಿಲ್ಲಾಧಿಕಾರಿಯಾಗಿ ಇಡೀ ಜಿಲ್ಲೆಯ ಆಡಳಿತ ನಡೆಸುತ್ತಿರುವ ಮಹಿಳೆ ನಾನೇ ಇದಕ್ಕೆ ಉದಾಹರಣೆ ಎನ್ನುತ್ತಾ ತಾವು ಕೂಡಾ ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ್ಮ ಶಿಕ್ಷಣ ನೀಡಲು ಮುಂದಾಗಿ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಮಾತನಾಡಿದರು.
ಏಪ್ರೀಲ್ 02 ರಂದು ವಿದ್ಯಾನಗರದ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಹಾಗೂ ವಿದ್ಯಾ ನಗರ ವೇಲ್‍ಫೇರ್ ಸೋಸೈಟಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ, ಉಪನ್ಯಾಸ ಮತ್ತು ಸತ್ಕಾರ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ಕಮಹಾದೇವಿಯರವರು ತಮ್ಮ ಜೀವನದಲ್ಲಿ ಎದುರಿಸಿಸದ ಕಷ್ಟ ಸಮಸ್ಯೆ ಅನುಭವದಿಂದಲೇ ವಚನಗಳು ಬರೆದು ಕನ್ನಡ ಸಾಹಿತ್ಯಾ ಲೋಕ ಶ್ರೀಮಂತಗೊಳ್ಳಿಸಿದ್ದಾರೆ ಎನ್ನುತ್ತಾ ಅನೇಕ ಅಕ್ಕನ ವಚನ ವಿಶ್ಲೇಷಗಳೊಂದಿಗೆ ಅಕ್ಕಮಹಾದೇವಿಯವರ ಜೀವನ ಚರಿತ್ರೆಯ ಕುರಿತು ಡಾ.ಶಿವಲೀಲಾ ಚಟ್ನಳ್ಳಿ ಅವರು ಉಪನ್ಯಾಸ ನೀಡಿದರು.
ಅಕ್ಕಮಹಾದೇವಿಯರವರು 12ನೇ ಶತಮಾನದಲ್ಲಿಯೇ ಕವಿಯಾಗಿ ಸಮಸ್ತ ಮಹಿಳಾ ಲೋಕಕ್ಕೆ ಆದರ್ಶ ಪ್ರೇಯರಾಗಿದ್ದಾರೆ ಎಂದು ಡಾ.ಕದಳಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಉಮೇಶ ಶೆಟ್ಟಿಯವರು ಸನ್ಮಾನ ಸ್ವೀಕರಿಸಿ ಅಕ್ಕನ ವಚನ ಹಾಡಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಅಧ್ಯಕ್ಷ ರತ್ನಮ್ಮ ನಿಂಬೂರ ಅವರು 11ನೇ ವಾರ್ಷಿಕೋತ್ಸವದ ನಿಮಿತ್ಯ ಸಂಘದ 11 ಚಟುವಟಿಕೆಯ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಬಡಾವಣೆಯ ಮಹಿಳಾ ಸಂಘಟನೆಯ ಮುಖ್ಯಸ್ಥರಿಗೆ ಸನ್ಮಾನಿಸಿ ಗೌರವಿಸಲಾಯಿತು. ಭಾರತಿ ಬಿರಾದಾರ (ಪ್ರಗತಿ ಕಾಲೋನಿ), ಲಕ್ಷ್ಮಿ ಕುಂಬಾರ (ಬಡೆಪೂರ ಕಾಲೋನಿ), ಶೈಲಾಜ ವಾಲಿ, ಅನುರಾಧ ಕುಮಾರಸ್ವಾಮಿ (ಜಯ ನಗರ), ಕಮಲಾಬಾಯಿ ಗೌಡತಿ (ಸ್ವಸ್ತಿಕ ನಗರ)
ರೇಖಾ ಅಂಡಗಿ ಪ್ರಾರ್ಥಿಸಿದರು, ಸುರೇಖಾ ಯಾದಗಿರ ಸ್ವಾಗತಿಸಿದರು, ತಾರಾ ಪಾಟೀಲ ವಂದಿಸಿದರು. ಡಾ. ಅನುರೀತಾ ಹಿಂದೊಡ್ಡಿ, ದೇವಿಕಾ ತಂಬಾಕೆ, ಮಧು ಹಿಂದೊಡ್ಡಿ, ನಿರೂಪಿಸಿ ನಿರ್ವಹಣೆ ಮಾಡಿದರು.