ರೋಸ್ಟರ್ ಪ್ರಕಾರ ಉದ್ಯೋಗ ಹಂಚಿಕೆಯಾದಲ್ಲಿ ಮಾತ್ರ ಮಾದಿಗ ಸಮಾಜಕ್ಕೆ ನ್ಯಾಯ: ಕೊಳ್ಳೂರ್

ಚಿಂಚೋಳಿ,ಮಾ.5-ಕರ್ನಾಟಕ ರಾಜ್ಯದಲ್ಲಿ ಮಾದಿಗ ಸಮಾಜವು ಒಳ ಮೀಸಲಾತಿ ಜಾರಿಗಾಗಿ ಸತತ 35 ವರ್ಷಗಳ ಕಾಲ ಹೋರಾಟ ಮಾಡಿ ಯಶಸ್ವಿಯಾಗಿದೆ. ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ (56432) ಉದ್ಯೋಗವನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯ ಆಗುವಂತೆ ರೋಸ್ಟರ್ ಪ್ರಕಾರ ಉದ್ಯೋಗ ಹಂಚಿಕೆಯಾದಲ್ಲಿ ಮಾತ್ರ ಮಾದಿಗ ಸಮಾಜಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಇಲ್ಲದಿದ್ದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಮಾದಿಗ ಸಮಾಜದ ಮುಖಂಡ ಆಕಾಶ್ ಕೊಳ್ಳೂರ್ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ನೇಮಕಾತಿಯಲ್ಲಿ ಮಾದಿಗ ಸಮಾಜಕ್ಕೆ ಅನ್ಯಾಯವಾದರೆ ಸುಮ್ಮನಿರೋದಿಲ್ಲ. ಸಮಾಜ ರೋಡಿಗಿಳಿದು ಹೋರಾಟ ಮಾಡೋದು ಅನಿವಾರ್ಯವಾಗುತ್ತದೆ ಸರ್ಕಾರ ತನ್ನ ಬದ್ಧತೆ ಕಾಪಾಡಿಕೊಳ್ಳಲಿ ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮಾಜದ ಮುಖಂಡರಾದ ಪ್ರದೀಪ್ ಮೇತ್ರಿ, ಮಚ್ಚೆಂದ್ರ ಸೇರಿಕಾರ್, ಇದ್ದರು