ನೆಲಕ್ಕೆ ಅಪ್ಪಳಿಸಿದ ಜೆಟ್ ವಿಮಾನ: ಇಬ್ಬರಿಗೆ ಗಂಭೀರ ಗಾಯ

ವಿಜಯಪುರ, ಫೆ. 9: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಬಳಿ ಜೆಟ್ ವಿಮಾನವೊಂದು ಜಮೀನಿನಲ್ಲಿ ಬಿದ್ದು ಪತನಗೊಂಡಿದೆ.
ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಜೆಟ್ ವಿಮಾನದಲ್ಲಿದ್ದ
ತೈಲ ಖಾಲಿಯಾದ ಕಾರಣ ಜೆಟ್ ವಿಮಾನ ನೆಲಕ್ಕೆ ಅಪ್ಪಳಿಸಿದೆ.
ಭಾನುವಾರ ಸಂಜೆ ಜೆಟ್ ವಿಮಾನ ಜಮೀನಲ್ಲಿ ಬಿದ್ದಿದೆ. ಇದು
ಸೆಸ್ನಾ 172 ಟ್ಯಾಂಗೋ ಚಾರ್ಲಿ ಲಘು ವಿಮಾನವಾಗಿದ್ದು,
ರೆಡ್ ಬರ್ಡ್ ಎವಿಯೇಷನ್ ಎಂಬ ವಿಮಾನ ತರಬೇತಿ ಸಂಸ್ಥೆ ಉಪಯೋಗಿಸುತ್ತಿದ್ದ ಜೆಟ್ ಪೈಲಟ್
ಕ್ಯಾಪ್ಟನ್ ಕುನಾಲ್ ಮಲ್ಹೋತ್ತಾ ಹಾಗೂ ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ. ಆರ್. ಎಂಬಿಬ್ಬರು ಲಘು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಸುದೈವ ವಶಾತ್ ಪೈಲೆಟ್ ಗಳಿಬ್ಬರಿಗೆ ಜೀವಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಬಬಲೇಶ್ವರ ಪೆÇಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡು ಇಬ್ಬರು ಗಾಯಗೊಂಡ ಪೈಲೆಟ್ ಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ತಾಂತ್ರಿಕ ದೋಷದಿಂದ ಜೆಟ್ ವಿಮಾನ ನೆಲಕ್ಕೆ ಅಪ್ಪಳಿಸಿದೆ ಎಂದು ಪೈಲೆಟ್ ಗಳು ತಿಳಿಸಿದ್ದಾರೆ.
ಬಬಲೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ