
ಬೆಂಗಳೂರು,ಏ.- ೧೧- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ( ಜಿಬಿಎ) ಐದೂ ನಗರ ಪಾಲಿಕೆಗಳ ಚುನಾವಣೆಗೆ ಜೆಡಿಎಸ್ ರಣಕಹಳೆ ಮೊಳಗಿಸಿದೆ. ಮುಂಬರುವ ಜಿಬಿಎ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ನಿಟ್ಟಿನಲ್ಲಿ ತಂತ್ರ ಹೆಣೆದಿದ್ದು ವಾರ್ಡ್ ನಲ್ಲಿ ಜನ ಸಂಪರ್ಕ ಹೊಂದಿರುವ ನಾಯಕರ ಹುಡುಕಾಟ ನಡೆಸಿದೆ.
ಜನಧ್ವನಿ ಹೆಸರಿನಲ್ಲಿ ಈಗಾಗಲೇ ಬೆಂಗಳೂರು ಜನಸಮಾವೇಶ ಮತ್ತು ಕಾರ್ಯಕರ್ತರ ನೋಂದಣಿ ಕಾರ್ಯಕ್ರಮ ಆಯೋಜಿಸಿ ಬೇರು ಮಟ್ಟದಲ್ಲಿ ಪಕ್ಷವನ್ನು ಪುನಶ್ಚೇತನ ನಿಟ್ಟಿನಲ್ಲಿ ಕಾರ್ಯೋನ್ನುಖವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯ ಹಿನ್ನೆಲೆಯಲ್ಲಿ ಕೊಮ್ಮಘಟ್ಟದಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದು ಶಂಕುನಾದ ಮೊಳಗಿಸಿದೆ.
ಕೊಮ್ಮ ಘಟ್ಟದಲ್ಲಿ ನಡೆದ ಸಮಾವೇಶಕ್ಕೆ ಕಾರ್ಯಕರ್ತರ ದಂಡೆ ಹರಿದು ಬಂತು. ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಕೋರ್ ಕಮಿಟಿ ಅಧ್ಯಕ್ಷರಾದ ಎಂ. ಕೃಷ್ಣಾರೆಡ್ಡಿ ಸೇರಿದಂತೆ ಪಕ್ಷದ ಎಲ್ಲಾ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಬಿಎ ಐದು ವಿಭಾಗದ ಅಧ್ಯಕ್ಷರು, ಮಹಿಳಾ ಪದಾಧಿಕಾರಿಗಳು, ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದರು. ಜನತಾ ಸಮಾವೇಶವನ್ನು ದೀಪಾ ಬೆಳಗಿಸುವ ಮೂಲಕ ಜನತಾ ಸಮಾವೇಶಕ್ಕೆ ಮಾಜಿ ಹೆಚ್.ಡಿ. ದೇವೇಗೌಡರವರು ಅಧಿಕೃತ ಚಾಲನೆ ನೀಡಿದರು.
ಬೆಂಗಳೂರು ಅಭಿವೃದ್ಧಿಗೆ ದೇವೇಗೌಡರು, ಕುಮಾರಸ್ವಾಮಿ ಕೊಡುಗೆ :
ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಸಾಕಷ್ಟು ಜನ ಬೆಂಗಳೂರು ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಕುಮಾರಸ್ವಾಮಿ ಅವರು ಕೊಡುಗೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿಯ ಬಗ್ಗೆ ಈ ನಾಯಕರು ತೆಗೆದುಕೊಂಡ ನಿರ್ಧಾರ ಇವತ್ತಿನ ಬೆಂಗಳೂರು ಅಭಿವೃದ್ಧಿಗೆ ಕಾರಣವಾಗಿದೆ.
ಮಾಜಿ ಪ್ರಧಾನಿ ದೇವೇಗೌಡರು ತೆಗೆದುಕೊಂಡ ಐತಿಹಾಸಿಕ ನಿರ್ಣಯಗಳು ಜನರ ಮನಸ್ಸಿನಲ್ಲಿ ಉಳಿದಿವೆ.
ಸಿಂಗಾಪೂರ್ ಸರ್ಕಾರದ ಜೊತೆ ಮಾತಾಡಿ ವೈಟ್ ಫೀಲ್ಡ್ ನಲ್ಲಿ ೪೦ ಸಾವಿರ ಉದ್ಯೋಗ ನೀಡುವ ಕಂಪನಿ ಆರಂಭಿಸಿದರು ಎಂದು ಶ್ಲಾಘಿಸಿದರು. ಬೆಂಗಳೂರು ನಗರ ನಿರ್ಮಾಣ ಮಾಡಿದ ಕೆಂಪೇಗೌಡ ಅವರ ಬ್ಲೂ ಪ್ರಿಂಟ್ನಿಂದ ಇವತ್ತು ಸಿಲಿಕಾನ್ ಸಿಟಿ ಆಗಿದೆ .
ಈ ವೇದಿಕೆ ಮೇಲೆ ಮೊದಲು ನಾಡಪ್ರಭು ಕೆಂಪೇಗೌಡರನ್ನ ಸ್ಮರಿಸುತ್ತೇನೆ ಎಂದರು.
ದೇವೇಗೌಡರು ಟ್ಯಾಕ್ಸ್ ಹಾಲೀಡೇ, ತೆರಿಗೆ ವಿನಾಯಿತಿ ನೀಡಿರು.ಬೆಂಗಳೂರಿನ ಸಂಚಾರದಟ್ಟಣೆ ನಿವಾರಣೆ ಮಾಡುವ ಯೋಜನೆ ರೂಪಿಸಿದರು.ಕುಡಿಯುವ ನೀರನ್ನು ೪ ನೇ ಹಂತದ ಕಾವೇರಿ ನೀರನ್ನ ನೀಡಿದರು.
ಅವರ ಸಾಧನೆ ಸೂರ್ಯ ಚಂದ್ರ ಅಷ್ಟೇ ಸತ್ಯ ಎಂದರು.
ಬಿಬಿಎಂಪಿ ರಚಿಸಿದ್ದು ಹೆಚ್ಡಿಕೆ:
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅನೇಕ ಯೋಜನೆ ಜಾರಿಗೆ ತಂದರು.ಮೆಟ್ರೋಗೆ ಹಸಿರು ನಿಶಾನೆ ತೋರಿದರು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಇವತ್ತು ಅಭಿವೃದ್ಧಿ ಕುಸಿಯುತ್ತಿದೆ. ಬೆಂಗಳೂರು ಜನತೆ ಅಭಿವೃದ್ಧಿ ವಂಚಿತ ಆಗಿದ್ದಾರೆ .ಕಾಂಗ್ರೆಸ್ ಅವರ ಸಾಧನೆ ಏನ್ ಆದ್ರೆ ಬಿಬಿಎಂಪಿ ಹೆಸರು ಬದಲಾಯಿಸಿದ್ದು ಅಷ್ಟೇ. ಜಿ ಅಂದ್ರೆ ಗಾರ್ಬೇಜ್ ಬಿ ಎಂದರೆ ಬ್ಯಾಡ್ ರೋಡ್ ಎ ಎಂದರೆ ಎ ಖಾತಾ ಸ್ಕ್ಯಾಮ್ ಎಂದು ವಾಗ್ದಾಳಿ ನಡೆಸಿದರು.
ಔಟರ್ ರಿಂಗ್ ರೋಡ್ ಇಂದ ಟ್ಯಾಕ್ಸ್ ಕಲೆಕ್ಷನ್ ಮಾಡಲಾಗುತ್ತಿದೆ. ದೊಡ್ದ ಕಂಪನಿ ಸಿಒಒ ಟ್ವೀಟ್ ಮಾಡುತ್ತಾರೆ. ಇಲ್ಲೀ ರಸ್ತೆ ಯಾವುದು ಚರಂಡಿ ಯಾವುದು ಗೊತ್ತಾಗಲ್ಲ ಪ್ರತಿದಿನ ನಮ್ಮ ಸಿಬ್ಬಂದಿಗಳು ೨ ಗಂಟೆ ಪ್ರಯಾಣ ಮಾಡ್ತಾರೆ ಎಂದು ಕಿದಿಕಾರಿದ್ದಾರೆ ಎಂದರು.
ಸ್ಕೈ ಡಕ್ ನಿರ್ಮಾಣ ಮಾಡುತ್ತೇನೆ ಎನ್ನುತ್ತಾರೆ. ಅವರಿಗೆ ಈವರೆಗೂ ಒಂದು ಇಟ್ಟಿಗೆ ಕೂಡ ಕಟ್ಟೋಕೆ ಆಗಿಲ್ಲ. ಯಾವ ಪುರುಷಾರ್ಥಕ್ಕೆ ಸ್ಕೈ ಡೆಕ್ ಎಂದು ಪ್ರಶ್ನೆ ಮಾಡಿದರು. ಮಂಡೂರು, ಬೆಳ್ಳಂದೂರಲ್ಲಿ ಕಸದ ಸಮಸ್ಯೆ.ಈವರೆಗೆ ಅದನ್ನ ವೈಜ್ಞಾನಿಕವಾಗಿ ಬಗೆಹರಿಸೋಕೆ ಕೆಲಸ ಆಗಿಲ್ಲ ಎಂದು ದೂರಿದರು.
ಹೆಚ್ಡಿಕೆ ಗ್ರಾಮ ವಾಸ್ತವ್ಯ ದೇಶಕ್ಕೆ ಮಾದರಿ
ಇಡೀ ದೇಶದಲ್ಲೇ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅನುಷ್ಠಾನಕ್ಕೆ ತಂದಿದ್ದಾರೆ. ಇದು ಕೇವಲ ಗ್ರಾಮ ವಾಸ್ತವ್ಯ ಮಾತ್ರವಲ್ಲ. ರೈತರ ಸಮಸ್ಯೆ ಆಲಿಸಿ, ರೈತರಿಗೆ ಆರ್ಥಿಕ ನೆರವು ಕೊಡುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರಲಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಂಡ್ಯ ಜಿಲ್ಲೆಯ ರೈತರ ನೆರವಿಗೆ ಧಾವಿಸಿದ್ದರು ಎಂದರು.























