ಈಶ್ವರ ಖಂಡ್ರೆ ಕಾಣೆಯಾಗಿದ್ದಾರೆ : ಭಗವಂತ ಖೂಬಾ

ಬೀದರ:ಅ.25:ಜಿಲ್ಲೆಗೆಆಪತ್ತು ಬಂದಾಗ, ಜಿಲ್ಲೆಯಜನರು, ರೈತರು, ಬಡವರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ಧಾಗಇವರಜೊತೆ ನಿಲ್ಲುವುದು ಬಿಟ್ಟುರಾಜಕೀಯಗುಂಗಿನಲ್ಲಿತಿರುಗಾಡುತ್ತಿರುವಈಶ್ವರಖಂಡ್ರೆಕಾಣೆಯಾಗಿದ್ದಾರೆ, ಇವರ ದುರಾಡಳಿತ, ನಿಷ್ಕಾಳಜಿ ಎದ್ದುಕಾಣುತ್ತಿದೆ, ಅತಿವೃಷ್ಟಿಯಾಗಿಜಿಲ್ಲೆಯಜನರುತೊಂದರೆಯಲ್ಲಿದ್ದಾರೆ, ಆದರೆಖಂಡ್ರೆ ಇಂದಿನವರೆಗೆ ಬೀದರಜಿಲ್ಲೆಯಕಡೆಕಣ್ಣೆತ್ತಿಯೂ ನೋಡಿಲ್ಲಾ, ಇಂತಹ ಬೇಜವಬ್ದಾರಿಉಸ್ತುವಾರಿ ಮಂತ್ರಿ ಸಿಕ್ಕಿದ್ದು ಜಿಲ್ಲೆಯದುರ್ದೈವಎಂದು ಮಾಜಿಕೇಂದ್ರ ಸಚಿವ ಭಗವಂತ ಖೂಬಾ ಈಶ್ವರಖಂಡ್ರೆ ವಿರುದ್ಧ ಹರಿಹಾಯ್ದಿದಿದ್ದಾರೆ.

ಜಿಲ್ಲೆಯಲ್ಲಾದಅತಿವೃಷ್ಟಿಯಿಂದಒಟ್ಟು 35 ಸಾವಿರಎಕ್ಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು ಸಾವಿರಾರುರೈತರು ವರ್ಷದ ಫಸಲು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ, 100ಕ್ಕೂ ಹೆಚ್ಚು ಪ್ರಾಣಿಹಾನಿ 200ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಬ್ರಿಡ್ಜಗಳು, 100 ಕ್ಕೂ ಅಧಿಕ ಗ್ರಾಮಗಳ ರಸ್ತೆಗಳು,300 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 133 ಅಂಗನವಾಡಿ ಕೇಂದ್ರಗಳು ಹಾನಿಗೊಳಗಾಗಿವೆ, ಇಷ್ಟೇಲ್ಲಾ ಅನಾಹುತಗಳಿಂದ ಸುಮಾರು 100 ಕೋಟಿರೂಪಾಯಿಯ ಹಾನಿಯಾಗಿದ್ದು, ಇಲ್ಲಿಯವರೆಗೆಜಿಲ್ಲೆಯಕಡೆಗೆಈಶ್ವರಖಂಡ್ರೆತಿರುಗಿ ನೋಡಿಲ್ಲಾ, ಬೇಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡದೆಇರುವುದುಇವರಅಧಿಕಾರದಅಹಂಕಾರ ಮತ್ತು ದುರಾಡಳಿತಕ್ಕೆ ಸಾಕ್ಷಿಯಾಗಿದೆ,.

ನಾನು ಕಳೆದ 10 ವರ್ಷಎಂಪಿಯಾಗಿ, 3 ವರ್ಷಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ, ಇಂತಹಕಷ್ಟದ ಸಮಯ ಬಂದಾಗ ಅಧಿವೇಷನಗಳು, ಸಭೆ ಸಮಾರಂಭಗಳು ಬಿಟ್ಟು, ಜಿಲ್ಲೆಯರೈತರೊಂದಿಗೆ ನಿಂತಿರುವೆ, ರೈತರಿಗೆ, ರೈತ ಕೂಲಿ ಕಾರ್ಮಿಕರಿಗೆಧೈರ್ಯತುಂಬಿ ಸರ್ಕಾರದಿಂದ ಪರಿಹಾರ ಒದಗಿಸಿಕೊಟ್ಟಿದ್ದೇನೆ, ಆದರೆಈಶ್ವರಖಂಡ್ರೆಎಲ್ಲೊಕುಂತುಆನ್‍ಲೈನ್ ಮೂಲಕ ಸಭೆ ನಡೆಸಿ, ನನಗೂ ಈ ಜಿಲ್ಲೆಗೂ ಸಂಬಂಧವೆಇಲ್ಲಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಶಾಸಕ, ಮಂತ್ರಿ, ಸಂಸದ, ಡಿ.ಸಿ.ಸಿ ಬ್ಯಾಂಕ್‍ಅಧ್ಯಕ್ಷ, ಎಲ್ಲಾಅಧಿಕಾರ ನಮ್ಮ ಮನೆಯಲ್ಲಿಯೆ ಇವೆ, ಯಾರು ಏನು ಮಾಡಿಕೊಳ್ಳುವವರಿದ್ದಾರೆ, ಯಾವನಿಗೆ ನಮ್ಮ ವಿರುದ್ಧಧ್ವನಿ ಎತ್ತುವಧೈರ್ಯಇದೆಎನ್ನುವಅಹಂಕಾರದಗುಂಗಿನಲ್ಲಿಓಡಾಡುತ್ತಿರುವಈಶ್ವರಖಂಡ್ರೆಯವರ ವರ್ತನೆಜಿಲ್ಲೆಯಜನರು ಗಮನಿಸುತ್ತಿದ್ದಾರೆಎಂದಿದ್ದಾರೆ.

ಧ್ವನಿ ಎತ್ತುವವರ ವಿರುದ್ದ ಪೋಲೀಸ್‍ರನ್ನು ಬಿಟ್ಟುಎಫ್.ಐ.ಆರ್ ಮಾಡಿಸಿ, ರೌಡಿ ಶಿಟರ್ ಹಾಕಿಸಿ, ಗಡಿಪಾರು ಮಾಡಿದ್ದರಾಯಿತುಎನ್ನುವ ಲೆಕ್ಕಾಚಾರದಲ್ಲ್ಲಿದ್ದಾರೆ. ಆದ್ದರಿಂದಲೆಇಲ್ಲಿಯವರೆಗೆಯಾರಿಗೂ ಮಾತನಾಡಲು, ಧ್ವನಿ ಎತ್ತಲು ಬಿಡುತ್ತಿಲ್ಲಾಎಂದು ಆರೋಪಿಸಿದ್ದಾರೆ.

ರೈತರಿಗೆ ಸರಿಯಾಗಿಗೊಬ್ಬರ ಸಹ ಸಿಗುತ್ತಿಲ್ಲಾ, ಅಂಗಡಿಗಳಲ್ಲಿ ಪ್ರತಿಚಿಲಕ್ಕೆ 100, 200 ರೂಪಾಯಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ, ಈ ಹೆಚ್ಚಿನಹಣಈಶ್ವರಖಂಡ್ರೆಯವರಿಗೆ ಹಫ್ತಾರೂಪದಲ್ಲಿ ಹೊಗುತ್ತಿದೆಎಂದುಜನರು ಮಾತಾಡಿಕೊಳ್ಳುತ್ತಿದ್ದಾರೆ, ಇಂತಹಜಿಲ್ಲಾಉಸ್ತುವಾರಿ ಮಂತ್ರಿ ನೀಡಿದ ಸಿದ್ದರಾಮಯ್ಯನವರಿಗೂ ಮತ್ತುಈಶ್ವರಖಂಡ್ರೆಗೂಜನರ ಶಾಪ ತಟ್ಟಲಿದೆಎಂದು ಭಗವಂತ ಖೂಬಾ ಕೀಡಿಕಾರಿದ್ದಾರೆ.

ಈಶ್ವರಖಂಡ್ರೆಎಲ್ಲೆಇದ್ದರು ಬೀದರಗೆ ಆಗಮಿಸಿ, ರೈತರ ಹೊಲಗಳಿಗೆ, ಬ್ರೀಡ್ಜಗಳಿಗೆ, ಕೆರೆಕಟ್ಟೆಗಳಿಗೆ ಭೇಟಿಕೊಟ್ಟು ವಿಕ್ಷಣೆ ಮಾಡಬೇಕು, ರೈತರಿಗೆ ಪರಿಹಾರ ಒದಗಿಸಿಕೊಡಬೇಕು, ಹಾಳಾದ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡಿಕೊಡಬೇಕೆಂದು ಮಾಜಿಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.