
ಅಳಿಯ, ಮಗಳು, ಮೊಮ್ಮಗಳು ಸಾವು
ಟೆಹ್ರಾನ್,ಮಾ.೧:ಇಸ್ರೇಲ್ ಅಮೆರಿಕ ನಡೆಸಿದ ಭೀಕರ ದಾಳಿಯಲ್ಲಿ ಇರಾನ್‌ನ ಪರಮೋಚ್ಛ ನಾಯಕ ಆಯತೊಲ್ಲ ಖಮೇನಿ ಅವರನ್ನು ಅವರ ಹತ್ಯೆಯಾಗಿದೆ. ಕಳೆದ ನಾಲ್ಕು ದಶಕಗಳ ಕಾಲ ಇರಾನಿನ ಪರಮೋಚ್ಛ ನಾಯಕರಾಗಿದ್ದ ಆಯತೊಲ್ಲಾ ಖಮೇನಿ ಪಶ್ಚಿಮಾತ್ಯ ರಾಷ್ಟ್ರಗಳ ಕಟು ವಿರೋಧಿಯಾಗಿದ್ದರು. ನಿನ್ನೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಆಯತೊಲ್ಲಾ ಖಮೇನಿ ಹತರಾಗಿದ್ದಾರೆ ಎಂದು ಇರಾನಿನ ಸರ್ಕಾರಿ ದೂರದರ್ಶನ ಇಂದು ಮುಂಜಾನೆ ಖಚಿತಪಡಿಸಿದೆ.
ಇರಾನ್‌ನ ೮೬ ವರ್ಷದ ಧರ್ಮಗುರು ಖಮೇನಿ ಅವರ ನಿವಾಸದ ಮೇಲೆ ಇಸ್ರೇಲ್ ಮತ್ತು ಅಮೆರಿಕಗಳು ಕ್ಷಿಪಣಿ ದಾಳಿ ನಡೆಸಿದ್ದು ಈ ಕ್ಷಿಪಣಿ ದಾಳಿಯಲ್ಲಿ ಅವರ ಮಗಳು ಅಳಿಯ ಮತ್ತು ಮೊಮ್ಮಗಳು ಕೂಡ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮ ವರದಿಗಳು ಹೇಳಿವೆ ಈ ದಾಳಿಯಲ್ಲಿ ಖಮೇನಿಯವರ ಉನ್ನತ ಸಲಹೆಗಾರ ಆಲಿ ಶಮ್ ಜಾನಿ ಮತ್ತು ರೆವಲ್ಯೂಷನ್ ಗಾಡ್ಸ್ ಮುಖ್ಯಸ್ಥರ ಆಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.ತೆಹ್ರಾನಲ್ಲಿರುವ ಆಯತೊಲ್ಲಾ ಖಮೇನಿಯವರ ಅರಮನೆಯನ್ನು ಗುರಿಯಾಗಿಸಿಕೊಂಡು ಅಮೆರಿಕಾ ಮತ್ತು ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದವು ಈ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಜೊತೆಗೆ ಅವರ ಮಗಳು ಅಳಿಯ ಮೊಮ್ಮಗಳು ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ದೃಢಪಡಿಸಿವೆ. ಇರಾನ್ ಮಾಧ್ಯಮಗಳು ಖಮೇನಿ ಅವರ ಹತ್ಯೆಯನ್ನು ದೃಢಪಡಿಸುವ ಕೆಲವೇ ಗಂಟೆಗಳ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಖಮೇನಿ ಹತ್ಯೆಯಾಗಿರುವುದನ್ನು ಪ್ರಕಟಿಸಿದ್ದರು.
೮೬ ವರ್ಷದ ನಾಯಕ ಆಯತೊಲ್ಲಾ ಆಲಿ ಖಮೇನಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಇರಾನ್ ಮತ್ತಷ್ಟು ಸೇಡು ತೀರಿಸಿಕೊಳ್ಳಲು ಮುಂದಾಗಿದೆ, ಇದರಿಂದ ಪರಮಾಣು ದಾಳಿ ಸೇರಿದಂತೆ ಯಾವುದೇ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ, ಈ ಹಿನ್ನಲೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಅಗತ್ಯ ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡಿವೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಸಾವನ್ನಪ್ಪಿದ್ದಾರೆ. ಜೊತೆಗೆ ಮತ್ತು ಹಿರಿಯ ಇಸ್ರೇಲಿ ಅಧಿಕಾರಿಯೊಬ್ಬರು ಅವರ ದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ರಾಜಧಾನಿ ಟೆಹ್ರಾನ್‌ನ ಕವೇರಿ ಆವರಣದಿಂದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ನಂತರ ವಶಪಡಿಸಿಕೊಂಡ ಮೃತದೇಹವನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೋರಿಸಲಾಗಿದೆ ಎಂದು ಇಸ್ರೇಲ್‌ನ ಚಾನೆಲ್ ವರದಿ ಮಾಡಿದೆ.
ಗೊತ್ತುಪಡಿಸಿದ ಉತ್ತರಾಧಿಕಾರಿ ಇಲ್ಲದ ಇಸ್ಲಾಮಿಕ್ ಗಣರಾಜ್ಯದ ಎರಡನೇ ನಾಯಕನ ಹತ್ಯೆ ಟೆಹ್ರಾನ್‌ನ ಭವಿಷ್ಯವನ್ನು ಅನುಮಾನಕ್ಕೆ ದೂಡಬಹುದು ಮತ್ತು ಇರಾನಿನ ಪ್ರತೀಕಾರದ ಬೆದರಿಕೆಗಳನ್ನು ಒಡ್ಡಿದರೆ ದೀರ್ಘಕಾಲದ ಸಂಘರ್ಷಕ್ಕೆ ಎಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಟ್ರಂಪ್ ಕೂಡ ಘೋಷಣೆ
ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ವಿಷಯವನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತ ಪಡಿಸಿದ್ದಾರೆ.
೮೬ ವರ್ಷದ ಇರಾನಿನ ನಾಯಕನ ಸಾವು “ಇರಾನಿನ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಏಕೈಕ ದೊಡ್ಡ ಅವಕಾಶ”ವಿದೆ. ಇರಾನಿನ ಮಿಲಿಟರಿ ಮತ್ತು ಸರ್ಕಾರಿ ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲಿ ಜಂಟಿಯಾಗಿ ನಡೆಸಿದ ವೈಮಾನಿಕ ಬಾಂಬ್ ದಾಳಿಯ ನಂತರ ಈ ಸಾವು ಸಂಭವಿಸಿದೆ.
೧೯೮೯ ರಿಂದ ಇರಾನ್ ಅನ್ನು ಮುನ್ನಡೆಸುತ್ತಿದ್ದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಗುರಿಯಾಗಿಸಲು ಅಮೆರಿಕ ಇಸ್ರೇಲ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಿದೆ ಎಂದು ಅಮೆರಿಕದ ಕಮಾಂಡರ್-ಇನ್-ಚೀಫ್ ಹೇಳಿದ್ದಾರೆ.
ಶಾಂತಿ ಸಿಗಲಿ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ನಂತg ಪರ್ಷಿಯನ್ ಭಾಷೆಯಲ್ಲಿ ಬರೆಯಲಾದ ಪೊ?ಸ್ಟ್‌ನಲ್ಲಿ “ನಮಿ ಹೈದರ್ (ಅವರಿಗೆ ಶಾಂತಿ ಸಿಗಲಿ) ಎಂದು ಬರೆಯಲಾಗಿದೆ ಎಂದು ಇರಾನ್ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ಜಗತ್ತಿನ ೮ ದೇಶಗಳ ಯುದ್ಧ ನಿಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮನ್ನು ಶಾಂತಿ ಧೂತ ಎಂದು ಕರೆದುಕೊಳ್ಳುತ್ತಿದ್ದಾರೆ, ಈಗ ಇಸ್ರೇಲ್ ಜೊತೆಗೂಡಿ ಇರಾನ್‌ನ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ್ದಾರೆ.






























