
ವಾಷಿಂಗ್ಟನ್,ಏ.೪- ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಕಳೆದ ೨೪ ಗಂಟೆಗಳಲ್ಲಿ ಅಮೆರಿಕದ ೨ ಯುದ್ಧ ವಿಮಾನಗಳನ್ನು ಇರಾನ್ ಹೊಡೆದುರುಳಿಸಿದೆ, ಓರ್ವ ಪೈಲೆಟ್ ಕಾಣೆಯಾಗಿರುವ ಘಟನೆ ನಡೆದಿದೆ.
ಎರಡು ಯುದ್ಧ ವಿಮಾನಗಳ ಜೊತೆಗೆ ೨ ಬ್ಲ್ಯಾಕ್ ಹಾಕ್ಸ್ಗಳನ್ನು ಹೊಡೆದುರುಳಿಸಲಾಗಿದೆ. ಕಾಣೆಯಾಗಿರುವ ಪೈಲೆಟ್ಗಾಗಿ ಅಮೆರಿಕ ಶೋಧ ಆರಂಭಿಸಿದೆ. ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ ಪ್ರತಿದಾಳಿ ನಡೆಸುವುದಾಗಿ ಅಮೆರಿಕ ಗುಡುಗಿದೆ.
ಒಂದೇ ದಿನದಲ್ಲಿ ಅಮೆರಿಕದ ಎರಡು ಯುದ್ಧ ವಿಮಾನಗಳನ್ನು ಇರಾನ್ ಹೊಡೆದುರುಳಿಸುವುದು ಇರಾನ್ನೊಂದಿಗಿನ ಸುಮಾರು ಐದು ವಾರಗಳ ಸಂಘರ್ಷ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇರಾನ್ ಮತ್ತು ಅಮೆರಿಕದ ಯುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಉಲ್ಬಣಗೊಳ್ಳುವ ಸ್ಪಷ್ಟ ಸೂಚನೆ ಎನ್ನುವಂತಿದ್ದು ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚುತ್ತಿದ್ದು ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಅಮೆರಿಕ ಮತ್ತು ಇರಾನಿನ ಅಧಿಕಾರಿಗಳು ದೃಢಪಡಿಸಿದ ಈ ಘಟನೆಗಳು, ಯುದ್ಧದಲ್ಲಿ ಮೊದಲ ಬಾರಿಗೆ ಅಮೆರಿಕದ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಇರಾನ್ನ ಈ ಕ್ರಮಕ್ಕೆ ಪ್ರತಿರೋಧ ತೀರಿಸಿಕೊಳ್ಳುವುದಾಗಿ ಅಮೆರಿಕ ಗುಡುಗಿದ್ದು ದಾಳಿ ನಡೆಸಲು ಸಿದ್ಧತೆ ನಡೆಸಿದೆ.
ಇರಾನ್ ವಾಯು ಪ್ರದೇಶದ ಪ್ರವೇಶಿಸಿದ ಎಫ್- ೧೫ಇ ಸ್ಟ್ರೈಕ್ ಈಗಲ್ ವಿಮಾನವನ್ನು ಆಕಾಶದ ಮಾರ್ಗಮದ್ಯೆ ಹೊಡೆದುರುಳಿಸಲಾಗಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಪ್ಯಾರಾಚೂಟ್ ಬಳಿಸಿ ಬಚಾವ್ ಆಗಿದ್ದು ಮತ್ತು ಮತ್ತೋರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕಾದ ಮತ್ತೊಂದು ಎಫ್-೧೬ ಯುದ್ಧ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ. ಇಂಧನ ತುಂಬುವ ಟ್ಯಾಂಕರ್ಗಳ ಮೆಲೆಯೂ ದಾಳಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಕೆಲವೇ ಗಂಟೆಗಳಲ್ಲಿ, ಇರಾನ್ ಮತ್ತು ಕೊಲ್ಲಿಯ ಮೇಲಿನ ಆಕಾಶ ಹೆಚ್ಚಿನ ಅಪಾಯದ ಯುದ್ಧ ವಲಯವಾಗಿ ಮಾರ್ಪಟ್ಟಿದೆ ಇದು ಅಮೆರಿಕ ವಾಯುಪ್ರದೇಶದ ನಿಯಂತ್ರಣದ ಬಗ್ಗೆ ಗಂಭೀರ ಅನುಮಾನ ಹುಟ್ಟುಹಾಕಿದೆ.
ಉಲ್ಕಾಪಾತದ ಕೇಂದ್ರದಲ್ಲಿ ಅಮೆರಿಕದ ಎಫ್-೧೫ಇ ಯುದ್ಧ ವಿಮಾನ ಹೊಡೆದುರುಳಿಸಿದ್ದು ಇದರಿಂದ ಅಮೆರಿಕ ಮತ್ತಷ್ಟು ಕೆಂಡಮಂಡಲವಾಗಿದ್ದು ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳದೆ ಸುಮ್ಮನೆ ಬಿಡುವುದಿಲ್ಲ ಎಂದಿದೆ.
ಫೆಬ್ರವರಿ ೨೮ ರಂದು ಯುದ್ಧ ಪ್ರಾರಂಭವಾದ ನಂತರ ಇರಾನ್ ಒಳಗೆ ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದು ಇದೇ ಮೊದಲಾಗಿದೆ.
























