ಇಸ್ರೇಲ್- ಅಮೆರಿಕ ಮೇಲೆ ಇರಾನ್ ಕ್ಷಿಪಣಿ ದಾಳಿ

ಟೆಲ್ ಅವೀವಾ,ಮಾ.೧- ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್‌ನ ಕ್ರಾಂತಿಕಾರಿ ಪಡೆಗಳು ಪ್ರತಿಜ್ಞೆ ಮಾಡಿದ ಕೆಲವೇ ಗಂಟೆಗಳ ನಂತರ, ಮಧ್ಯಪ್ರಾಚ್ಯದಲ್ಲಿರುವ ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ ಇತರೆ ದೇಶಗಳ ವಾಯು ನೆಲೆಗಳ ಮೇಲೆ ಮತ್ತೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.

ಇರಾನ್ ಹೊಸ ದಾಳಿಯಲ್ಲಿ ದುಬೈ ಮತ್ತು ಕತಾರ್ ರಾಜಧಾನಿ ದೋಹಾದಲ್ಲಿ ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದಿವೆ. ಯುಎಇ ಮತ್ತು ಕತಾರ್ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೂ ದಾಳಿ ನಡೆದಿದೆ, ಇರಾನ್‌ನ ವಾಯು ದಾಳಿಯು ತನ್ನ ಶತ್ರುಗಳ ಜೊತೆ ಸೇರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ತನ್ನ ನೆರೆಹೊರೆ ದೇಶಗಳಿಗೆ ರವಾನಿಸಿದೆ.

ಇರಾನ್‌ನ ಸರ್ವೋಚ್ಚ ನಾಯಕ ಆಯುತೊಲ್ಲಾ ಆಲಿ ಖಮೇನಿ ಅವರನ್ನು ಇಸ್ರೆಲ್- ಅಮೇರಿಕಾ ಜಂಟಿಯಾಗಿ ದಾಳಿ ನಡೆಸಿದ ಹತ್ಯೆ ಮಾಡಿದ ಬೆನ್ನಲ್ಲೇ ಪ್ರತೀಕಾರವಾಗಿ ಇರಾನ್ ,ಇಸ್ರೇಲ್ ಮತ್ತು ಅಮೆರಿಕ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದು ಎಲ್ಲೆಲ್ಲಿಯೂ ಸೈರನ್ ಮೊಳಗಿದ್ದು ಜನ ಹಿಡಿ ಜೀವ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.


ಎಲ್ಲೆಡೆ ಕಚ್ಚೆಚ್ಚರ:


ಸರ್ವೋಚ್ಛ ನಾಯಕ ಆಯುತೊಲ್ಲಾ ಆಲಿ ಖಮೇನಿ ಸಾವಿಗೆ ಪ್ರತಿಕಾರವಾಗಿ ಇರಾನ್ “ಅತ್ಯಂತ ಉಗ್ರ” ದಾಳಿ ಪ್ರತಿಜ್ಞೆ ಮಾಡಿದ ಹಿನ್ನೆಲೆಯಲ್ಲಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿ ಸೈರನ್‌ಗಳು ಮೊಳಗಿವೆ. ಎಲ್ಲೆಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಇಸ್ರೇಲ್ ಸೂಚನೆ ನೀಡಿದೆ

೧೯೮೯ ರಿಂದ ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಪಶ್ಚಿಮದ ಬದ್ಧ ವೈರಿ ಆಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಯುತ್ತಿದೆ. ಎರಡು ಶಕ್ತಿಗಳು ಇಸ್ಲಾಮಿಕ್ ಗಣರಾಜ್ಯವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದು ಜನರು ಹಿಡಿ ಜೀವ ಹಿಡಿದು ಬದುಕುವಂತಾಗಿದೆ.

ಆಯತೊಲ್ಲಾ ಆಲಿ ಖಮೇನಿ ಸಾವಿನ ನಂತರ ಅಮೇರಿಕಾ- ಇಸ್ರೇಲ್ ನೆಲೆಗಳ ಮೇಲೆ ಇರಾನ್ ಹೊಸ ದಾಳಿ ನಡೆಸಿದೆ ಇಸ್ರೇಲ್, ಅಮೆರಿಕ ವಾಯು ನೆಲೆಗಳ ಮೇಲೆ “ವ್ಯಾಪಕ ಕ್ಷಿಪಣಿ, ಡ್ರೋನ್ ದಾಳಿ” ಪ್ರಾರಂಭಿಸಲಾಗಿದೆ ಎಂದು ಇಸ್ರೇಲ್, ಅಮೆರಿಕ ಹೇಳಿದೆ.

ಕೊಲೆಗಾರಿಗೆ ತಕ್ಕ ಶಾಸ್ತಿ; ಇರಾನ್ ಪ್ರತಿಜ್ಞೆ


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಇತಿಹಾಸದ ಅತ್ಯಂತ ದುಷ್ಟ ಎಂದು ಹೇಳಿರುವ ಇರಾನ್, ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯವರ “ಕೊಲೆಗಾರರನ್ನು” ಶಿಕ್ಷಿಸುವುದಾಗಿ ಇರಾನ್‌ನ ಕ್ರಾಂತಿಕಾರಿ ಪಡೆಗಳು ಪ್ರತಿಜ್ಞೆ ಮಾಡಿದವು.

“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆಯು ಯಾವುದೇ ಕ್ಷಣದಲ್ಲಿ ಪ್ರಾರಂಭವಾಗಲಿದೆ” ಎಂದು ಗುಡುಗಿವೆ.

ಈ ಪ್ರದೇಶದಲ್ಲಿನ “ಆಕ್ರಮಿತ ಪ್ರದೇಶಗಳು ಮತ್ತು ಅಮೆರಿಕನ್ ಭಯೋತ್ಪಾದಕ ನೆಲೆಗಳನ್ನು” ಗುರಿಯಾಗಿರಿಸಿ ದಾಳಿ ನಡೆಯಲಿದೆ ಎಂದು ಹೇಳಿದ್ದು ಈ ನೆಲೆಗಳು ಗಲ್ಫ್ ದೇಶಗಳಲ್ಲಿವೆ, ಅವು ಈಗಾಗಲೇ ಅಭೂತಪೂರ್ವ ಸರಣಿಯ ಮಾರಕ ಭೀತಿ ಎದುರಿಸುತ್ತಿವೆ.

ಚುನಾಯಿತ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಾಮಾನ್ಯ ಮಿಲಿಟರಿಗಿಂತ ಭಿನ್ನವಾಗಿ, ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ಸ್ ಕಾರ್ಪ್ಸ್ ಸರ್ವೋಚ್ಚ ನಾಯಕನಿಗೆ ನೇರವಾಗಿ ಉತ್ತರಿಸುವ ಜವಾಬ್ದಾರಿ ಹೊಂದಿದೆ, ಹೀಗಾಗಿ ಯಾವುದೇ ಕ್ಷಣದಲ್ಲಿ ಭಾರೀ ಪ್ರತಿದಾಳಿ ನಡೆಯಲಿದೆ ಎಂದು ಹೇಳಲಾಗಿದೆ.