ಖಂಡ್ರೆ ಸೂಚನೆ ಜಾಲರಿ ಅಳವಡಿಕೆ

ಬೆಂಗಳೂರು, ಆ. ೧೬- ಬೆಂಗಳೂರಿನ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನದ ಸಫಾರಿ ವಾಹನದ ಮೇಲೆ ಚಿರತೆ ದಾಳಿ ಮಾಡಿ ಬಾಲಕನಿಗೆ ಕೈಗೆ ಗಾಯ ಆದ ಹಿನ್ನೆಲೆಯಲ್ಲಿ ಸಫಾರಿ ವಾಹನಗಳಿಗೆ ಜಾಲರಿ ಅಳವಡಿಸಲಾಗಿದೆ.


ಬನ್ನೇರುಘಟ್ಟದ ಸಫಾರಿ ವಾಹನದ ಮೇಲೆ ಚಿರತೆ ದಾಳಿ ಹಿನ್ನೆಲೆಯಲ್ಲಿ ಎಲ್ಲ ಸಫಾರಿ ವಾಹನಗಳ ಕಿಟಕಿ ಮತ್ತು ಛಾಯಾಗ್ರಹಣದ ರಂಧ್ರಗಳಿಗೆ ಕಡ್ಡಾಯ
ವಾಗಿ ಜಾಲರಿ ಅಳವಡಿಸಲು ಅರಣ್ಯ ಸಚಿವ ಈಶ್ವರಖಂಡ್ರೆ ಸೂಚನೆ ನೀಡಿದ್ದರು. ಹಾಗೆಯೇ ಸಫಾರಿ ವೇಳೆ ಎಲ್ಲ ಅಗತ್ಯ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಲು ಪ್ರವಾಸಿಗರಿಗೆ ಸೂಕ್ತ ಎಚ್ಚರಿಕೆ ನೀಡಲೂ ಹಾಗೂ ಸಫಾರಿ ಟಿಕೆಟ್‌ನಲ್ಲಿಯೇ ಎಚ್ಚರಿಕೆಯ ಸಂದೇಶ ಮುದ್ರಿಸುವಂತೆ ಸೂಚಿಸಿದ್ದರು. ಅದರಂತೆ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನದ ಸಫಾರಿ ವಾಹನಗಳಿಗೆ ಈಗ ಜಾಲರಿ ಅಳವಡಿಸಲಾಗಿದೆ.