ಸ್ವಾತಂತ್ರ್ಯ ದಿನಾಚರಣೆ: ನಿವೃತ್ತ ಯೋಧರಿಗೆ ಸನ್ಮಾನ

ಕಲಬುರಗಿ,ಆ.16-ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯಲ್ಲಿ ದಂಡಗುಂಡ ಬಸವಣ್ಣ ಮತ್ತು ಶ್ರೀ ವೀರ ಆಂಜನೇಯ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ಯವಾಗಿ ಹಮ್ಮಿಕೊಂಡಿರುವ ಸೋಲಾಪೂರ (ಸೊನ್ನಲಗಿಯ) ಸಿದ್ದರಾಮೇಶ್ವರ ಮಹಾಪುರಾಣ ಕಾರ್ಯಕ್ರಮದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಸಂತೋಷ ಶೆಟಗಾರ, ಪರಮೇಶ್ವರ ಶಿರೋಳೆ, ಸುಧಾಕರ ಸುತಾರ್ ಅವರನ್ನು ಸನ್ಮಾನಿಸಲಾಯಿತು.
ವೇ.ಪಂ.ಸಿದ್ದೇಶ್ವರ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಸುಂಟನೂರ ಅವರು ಪುರಾಣ ಪ್ರವಚನ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಬಸಯ್ಯ ಸ್ವಾಮಿಗಳು ಸ್ಥಾವರಮಠ ಗವಾಯಿಗಳಾಗಿದ್ದಾರೆ. ವೀರಯ್ಯಸ್ವಾಮಿ ಮಠಪತಿ ತಬಲಾ ಸಾಥ್ ನೀಡುತ್ತಿದ್ದಾರೆ.
23 ರಂದು ಬೆಳಿಗ್ಗೆ 8 ಗಂಟೆಗೆ ದಂಡಗುಂಡ ಬಸವಣ್ಣ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ.