
ಬಾದಾಮಿ,ಏ4: ಪಟ್ಟಣದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಎಸ್.ಬಿ.ಮಮದಾಪೂರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದಲ್ಲಿ 2025-26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮ ಕೆಂದೂರ ದಲ್ಲಿ ಎರಡನೇಯ ದಿನ ಜಿಲ್ಲಾ ರಕ್ತ ಭಂಡಾರ ಘಟಕದ ವೈದ್ಯಾಧಿಕಾರಿ ಪಾಂಡುರಂಗ ದೊಡ್ಡಮನಿ ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿದರು.
ಎನ್.ಎಸ್.ಎಸ್.ಕಾರ್ಯಕ್ರಮಧಿಕಾರಿ ಬಸವರಾಜ್ ಕಟ್ಟಿಮನಿ ಹಾಗೂ ಜಿಲ್ಲಾ ರಕ್ತ ಭಂಡಾರದ ಆಪ್ತ ಸಮಾಲೋಚಕರಾದ ಶ್ರೀಪಾದ ಮಾಳಗಿ ಹಾಗೂ ದುರ್ಗೇಶ್ ಭೋವಿ ಉಪಸ್ಥಿತರಿದ್ದರು. ದಾವಣಗೆರೆಯ ಶತಕಗಳ ಸರದಾರ ಕರ್ನಾಟಕದ ಬ್ಲಡ್ ಮ್ಯಾನ್ ಎಂದೇ ಖ್ಯಾತಿ ಪಡೆದ ಶಿವಕುಮಾರ್ ಮಹಡಿಮನಿ ಇವರು 106 ಬಾರಿ ರಕ್ತದಾನ ಮಾಡಿ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ಎನ್.ಎಸ್.ಎಸ್ ಸ್ವಯಂಸೇವಕರು ಒಟ್ಟು 18 ಯೂನಿಟ್ ನೀಡಿದರು.




















