
ಸೇಡಂ, ಆ,29: ರಾಜ್ಯ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಜಾರಿ ಮಾಡಿರುವುದರಿಂದ ಬಂಜಾರ ಭೋವಿ ಕೊರಚ ಮತ್ತು ಕೊರಮ ಸಮಾಜಗಳಿಗೆ ತುಂಬಾ ಅನ್ಯಾಯ ಮಾಡಿದೆ ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಲೋಕಸಭಾ ಸಂಸದರಾದ ಡಾ.ಉಮೇಶ್ ಜಾದವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿರುವ ಸಕ್ರ್ಯೂಟ್ ಹೌಸನಲ್ಲಿ ನ್ಯಾ.ನಾಗಮೋಹನ ದಾಸ್ ವರದಿ ಜಾರಿಯಿಂದ ವಿವಿಧ ಸಮಾಜದವರಿಗೆ ಅನ್ಯಾಯ ವಿರುದ್ಧ ಹೋರಾಟಕ್ಕಾಗಿ ಜರುಗಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಂಜಾರ, ಭೋವಿ,ಕೊರಚ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇದೇ ಸೆಪ್ಟಂಬರ್ 10 ರಂದು ರಾಜ್ಯದಾದ್ಯಂತ ಬೆಂಗಳೂರು ಚಲೋ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಈ ಸಭೆಯಲ್ಲಿ ಚಂದು ಜಾದವ್ ಖೇಮಸಿಂಗ್, ಪ್ರೇಮ್ ಕುಮಾರ್, ರಾಮಯ್ಯ ಪೂಜಾರಿ, ಶ್ರೀನಿವಾಸ್ ಚವ್ಹಾಣ, ವಿನೋದ್ ಚವ್ಹಾಣ್, ಗೋಪಾಲ್ ರಾಥೋಡ್, ಅಶೋಕ್ ಪವಾರ್, ಧರ್ಮರಾಜ್ ಚವ್ಹಾಣ, ರಮೇಶ್ ರಾಥೋಡ್, ತುಕಾರಾಂ, ರಾಜು ಚವ್ಹಾಣ, ವಿಜಯ್ ಕುಮಾರ್ ಪವಾರ್ ಕಿಶನ್ ಪವಾರ್ ದಶರಥ ಜಾದವ್, ರವಿ ಕಿನ್ನೂರು ರಾಥೋಡ್, ಸೇರಿದಂತೆ ವಿವಿಧ ಸಮಾಜದ ಮುಖಂಡರು ಯುವಕರು ಇದ್ದರು.