ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ 4 ಲಕ್ಷ ಅಧಿಕ ಮೌಲ್ಯದ 12980 ಕೆ.ಜಿ ಪಡಿತರ ಅಕ್ಕಿ ಜಪ್ತಿ

ಜಮಖಂಡಿ:ಡಿ.12:ಸರ್ಕಾರದ ವಿವಿಧ ಯೋಜನೆಗಳಿಗೆ ಮೀಸಲಾದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಖರೀದಿ ಮಾಡಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 12980 ಕೆ.ಜಿ.ಅಕ್ಕಿಯನ್ನು ತಾಲೂಕಿನ ಸಿದ್ದಾಪುರ ಗ್ರಾಮದ ಗಲಗಲಿ ಪುನರ್ವಸತಿ ಕೇಂದ್ರದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ನೇತೃತ್ವದ ಆಹಾರ ಇಲಾಖೆ ಜಪ್ತಿ ಮಾಡಿದೆ.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹಾಗೂ ತಹಶಿಲ್ದಾರ ಅನೀಲ ಬಡಗೇರ ಅವರ ನೇತೃತ್ವದಲ್ಲಿ ನಡೆದ ದಾಳಿಯ ವೇಳೆ, ಲಾರಿಯಲ್ಲಿ (ಏಂ-22/ಃ-3708) ಸಾಗಾಟ ಮಾಡುತಿದ್ದ 12980 ಕೆ.ಜಿ 4,49,108/ತೂಕವುಳ್ಳ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಗಲಗಲಿ ಪುನರ್ವಸತಿ ಕೇಂದ್ರದಲ್ಲಿ ಇರುವ ಒಂದು ಶೆಡ್ಡಿನಲಿ ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಬೇರೆ ಕಡೆಗೆ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ ಅಧಿಕಾರಿಗಳು ದಾಳಿ ಮಾಡಿ ಲಾರಿ ಸಮೇತವಾಗಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಲ್ಕು ಜನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ. ಜಪ್ತಿ ಮಾಡಿದ ಅಕ್ಕಿ ಮತ್ತು ಲಾರಿಯನ್ನು ಅಗತ್ಯ ಸರಕುಗಳ ಕಾಯ್ದೆ, 1955 (U/s-3,7)ಅಡಿ ಮುಂದಿನ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಫಲಾನುಭವಿಗಳಿಗೆ ಎನ್‍ಎಫ್‍ಎಸ್‍ಎ ಮತ್ತು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡಿತರವನ್ನು ವಿತರಿಸಲಾಗುತ್ತಿದೆ. ಯಾವುದೇ ಪಡಿತರಚೀಟಿದಾರ ಅಥವಾ ಅದರಲ್ಲಿರುವ ಸದಸ್ಯರು ತಮಗೆ ಹಂಚಿಕೆಯಾದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ಪಡಿತರ ಚೀಟಿಯನ್ನು 6 ತಿಂಗಳ ಅವಧಿಗೆ ಅಮಾನತ್ತುಪಡಿಸುವುದು ಮತ್ತು ಸದರ ಆಹಾರಧಾನ್ಯಕ್ಕೆ ಎದುರಾಗಿ ಮುಕ್ತಮಾರುಕಟ್ಟೆಯ ದರದಂತೆ ದಂಡ ವಿಧಿಸಲು ಸರ್ಕಾರದಿಂದ ಆದೇಶಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಾಳ ಸಂತೆ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಜಮಖಂಡಿ ಉಪವಿಭಾಗದ ಮುಧೋಳ, ಜಮಖಂಡಿ, ರಬಕವಿ ಬನಹಟ್ಟಿ,ಬಿಳಗಿಯಲ್ಲಿ ಚೆಕ್ ಪೆÇೀಸ್ಟ್ ಗಳನ್ನು ಕೊಡ ನಿರ್ಮಿಸಲಾಗಿದೆ ಎಂದರು.

ಹಂಚಿಕೆಯಾದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಾಜನಿಕರು ಸಂಭಂದಿಸಿದ ತಹಶಿಲ್ದಾರ ಹಾಗೂ ಆಹಾರ ನೀರಿಕ್ಷರಿಗೆ ಮಾಹಿತಿ ನೀಡಿ ಇಲಾಖೆಯೊಂದಿಗೆ ಸಹಕರಿಬೇಕು ಮತ್ತು ಸಂಭಂಧ ಪಟ್ಟ ಪಡಿತರ ವಿತರಣೆ ಅಂಗಡಿಕಾರರು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಇಲ್ಲವಾದಲ್ಲಿ ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವದು ಎಂದು ಎಚ್ವರಿಕೆ ನೀಡಿದ್ದಾರೆ