
ಕೆಜಿಎಫ್:ಏ:೬: ಭಗವಂತನ ಸ್ಮರಣೆಯಿಂದ ಕಷ್ಟುಗಳು ದೂರವಾಗಲಿದೆ ಮತ್ತು ಆತ್ಮ ತೃಪ್ತಿಯು ಲಭಿಸಲಿದೆ ನಮ್ಮನ್ನು ಮುನ್ನೆಡೆಸುತ್ತಿರುವ ಕಾಣದ ದೇವರು ಅವನು ತೋರಿಸುವ ಸನ್ಮರ್ಗದಲ್ಲಿ ಮುನ್ನೆಡೆದರೆ ಜೀವನದಲ್ಲಿ ಯಶಸ್ಸು ಲಭಿಸಲಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಹೇಳಿದರು.
ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ತಮ್ಮ ಫಾರಂ ಹೌಸ್ ನಲ್ಲಿ ಅಯೋಜಸಿದ್ದ ಐಯ್ಯಪ್ಪಮಾಲಾಧಾರಿಗಳ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಮತನಾಡಿ ನಮಗೆ ಕಷ್ಟಗಳು ಬಂದಾಗ ಮಾತ್ರ ಭಗವಂತನನ್ನು ನೆನೆಪಿಸಿಕೊಳ್ಳುವುದಿಕ್ಕಿಂತ ನಿತ್ಯ ಭಗವಂತನ ಸ್ಮರಣೆ ಮಾಡುವುದರಿಂದ ಕಷ್ಟಗಳು ದೂರವಾಗಲಿದೆ ಮತ್ತು ನೆಮ್ಮದಿಯ ಬದುಕುಕೊಂಡುಕೊಳ್ಳಲು ಸಾಧ್ಯವಾಗಲಿದೆ ಆದ್ದರಿಂದ ಜನರು ದೇವಾಲಯಗಳಲ್ಲಿ ನಡೆಯುವ ಜಾತ್ರೆ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಮತ್ತು ನಮ್ಮ ಸಂಸ್ಕೃತಿ ಆಚರಣೆ ವಿಚಾರಗಳನ್ನು ಮುಮದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು .
ಸರಿ ಸುಮಾರು ೪ ಗಂಟೆಗಳಿಗೂ ಅಧಿಕ ಐಯ್ಯಪ್ಪಮಾಲಾಧಾರಿಗಳು ಪೂಜಾಕೈಕಾರ್ಯಗಳನ್ನು ನೆಡೆಸಿದರು .
ಈ ವೇಳೆ ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಯಪಾಲ್, ಮಾಜಿ ನಗರಸಭೆ ಸದಸ್ಯ ಶನ್ಮಗಂ,ಶಶಿಕುಮಾರ್, ರಾಜವೇಲು ,ಲತಾ ಹಾಗೂ ಇತರರು ಹಾಜರಿದ್ದರು .























