Home ಜಿಲ್ಲೆ ನಿಮ್ಮ ಸಹಕಾರದಿಂದ ಉತ್ತಮ ಕಾರ್ಯ ನಿರ್ವಹಿಸಿದ್ದೇನೆ:ಕಲಾಲ

ನಿಮ್ಮ ಸಹಕಾರದಿಂದ ಉತ್ತಮ ಕಾರ್ಯ ನಿರ್ವಹಿಸಿದ್ದೇನೆ:ಕಲಾಲ

ಸೈದಾಪುರ:ಮಾ.30:ಇಲ್ಲಿಗೆ ಸಮೀಪದ ಬಳಿಚಕ್ರ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಮಹಾಂತೇಶ ಕಲಾಲ ಅವರಿಗೆ ಕಲಬುರಗಿ ದಿಶಾ ಕಾಲೇಜಿನಲ್ಲಿ ಹಮ್ಮಿಕೊಂಡ ಕನ್ನಡ ವಿಷಯದ ದ್ವಿತೀಯ ವರ್ಷದ ಪಿಯುಸಿ ಮೌಲ್ಯಮಾಪನ ಮುಕ್ತಾಯ ಸಮಾರಂಭ ಕಾರ್ಯಕ್ರಮದಲ್ಲಿ ಪರೀಕ್ಷೆ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಯಾದಗಿರಿ ಜಿಲ್ಲಾ ಕನ್ನಡ ಉಪನ್ಯಾಸಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ಕಲಾಲ ಮಾತನಾಡಿ, ಸೆಪ್ಟಂಬರ ತಿಂಗಳಲ್ಲಿ ನಾನು ವಯೋನಿವೃತ್ತಿ ಹೊಂದುತ್ತಿದ್ದೂ ಮುಂದಿನ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನದಲ್ಲಿ ನನಗೆ ನಿಮ್ಮೊಂದಿಗೆ ಬರೆಯುವ ಅವಕಾಶ ಇರುವುದಿಲ್ಲ. ನೀವು ಇಲ್ಲಿಯವರೆಗೆ ತೋರಿದ ಪ್ರೀತಿ, ವಿಶ್ವಾಸದಿಂದ ನನ್ನ ಸೇವಾ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಮಲ್ಯಮಾಪನದಲ್ಲಿ ಭಾಗವಹಿಸಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಅನುಭವಗಳಾಗಿವೆ. ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ನನಗೆ ನನ್ನ ಬಳಗದಿಂದ ಸನ್ಮಾನಿತರಾಗುತ್ತಿರುವುದು ಸಂತಸವನ್ನುಂಟು ಮಾಡಿದೆ. ನಿಮ್ಮ ಹಾರೈಕೆ ಸದಾ ನನ್ನ ಮೇಲೆ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ದಿಶಾ ಕಾಲೇಜು ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಖಜೂರಗಿ, ಮೌಲ್ಯಮಾಪನ ಕೇಂದ್ರದ ಪರಿವೀಕ್ಷಕ ಶ್ರೀಶೈಲ ಬೋನಾಳ, ಶಿಬಿರದ ಮುಖ್ಯಸ್ಥ ಶಿವರಾಜ ಬಿರಾದಾರ, ಮಲ್ಲಿಕಾರ್ಜುನ ಹಂಗರಿಗಿ, ವಿಜಯಕುಮಾರ ರೋಣದ, ಯಾದಗಿರಿ ಜಿಲ್ಲೆಯ ವಿವಿಧ ತಾಲೂಕಗಳ ಸರಕಾರಿ, ಅನುದಾನಿತ, ಅನುದಾನ ರೈಹಿತ ಕನ್ನಡ ಉಪನ್ಯಾಸಕರು ಸೇರಿದಂತೆ ಇತರರಿದ್ದರು.