ಪತ್ನಿ ಮೇಲೆ ಸಂಶಯ ಪಟ್ಟು ಪತ್ನಿಯ ತಲೆ ಬೋಳಿಸಿದ ಪತಿ

ಜಮಖಂಡಿ:ಫೆ.4: ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಸಾರಾಯಿ ಸೇವಿಸಿ ಕುಡಿತದ ಅಮಲಿನಲ್ಲಿ ಪತ್ನಿಯ ಮೇಲೆ ಸಂಶಯ ಪಟ್ಟು ಪತ್ನಿಯ ತಲೆಯನ್ನು ಬೋಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿತನು ತನ್ನ ಪತ್ನಿಯ ಕುತ್ತಿಗೆಗೆ ಕಬ್ಬು ಕಟಾವು ಮಾಡುವ ಆಯುಧವನ್ನು ಹಿಡಿದು ಬೆದರಿಸಿ ಹೆಂಡತಿಯ ತಲೆ ಬೋಳಿಸಿದ್ದಾನೆ ಎಂದು ಮಾಹಿತಿ ಲಬ್ಯವಾಗಿದೆ.

ಆರೋಪಿತನು ಉಮೇಶ ಕೊಟ್ಟಲಗಿ (36) ಮೂಲತಃ ಅಥಣಿ ತಾಲೂಕಿನ ಕೋಟಲಗಿ ಗ್ರಾಮದವನಾಗಿದ್ದು ಹಲವು ವರ್ಷಗಳಿಂದ ತೊದಲಬಾಗಿ ಗ್ರಾಮದ ಲಕ್ಷ್ಮಿ ನಗರದಲ್ಲಿ ತನ್ನ ತಾಯಿ ಲಕ್ಶ್ಮಿಂಬಾಯಿ ಹಾಗೂ ತನ್ನ ಪತ್ನಿ ಅಶ್ವಿನಿ ಜೋತೆಗೆ ಹೊಟ್ಟೆ ಪಾಡಿಗಾಗಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಸಾವಳಗಿ ಪೆÇೀಲಿಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.