ಕತ್ತರಿಯಿಂದ ತಿವಿದು ಪತ್ನಿ ಕೊಂದ ಪತಿ

ತೇರದಾಳ,ಡಿ.13-ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತರಿಯಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಲಕ್ಷ್ಮೀ ಭರತೇಶ ಮಹೇಶವಾಡಗಿ (28) ಎಂದು ಗುರ್ತಿಸಲಾಗಿದೆ.
ಪತಿ ಭರತೇಶ ಮಹೇಶವಾಡಗಿ ಕೊಲೆ ಮಾಡಿದ ಆರೋಪಿ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
ಆರೋಪಿತನಾದ ಭರತೇಶ ಪಾರೀಸ್ ಮಹೇಶವಾಡಗಿ ಈತನು ಅನೈತಿಕ ಸಂಬಂಧ ಹೊಂದಿದ್ದು ಅಲ್ಲದೇ ಈತನ ತಾಯಿಯಾದ ಪದ್ಮಾವತಿ ಗಂಡ ಪಾರೀಸ್ ಮಹೇಶವಾಡಗಿ ಇವರಿಬ್ಬರೂ ಕೂಡಿ ಕೊಲೆಯಾದ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ವರದಕ್ಷಿಣೆ ಹಣ ಪಡೆದುಕೊಂಡಿದ್ದರು. ಅಲ್ಲದೇ ತಾಯಿಯ ಪ್ರಚೋದನೆಯಿಂದ ಹೆಂಡತಿ ಲಕ್ಷ್ಮೀಯನ್ನು ಡಿ.10 ರಂದು ರಾತ್ರಿ ಪಟ್ಟಣದ ಗುಮ್ಮಟ ಗಲ್ಲಿಯಲ್ಲಿರುವ ತನ್ನ ಮನೆಯ ಪಡಸಾಲೆಯಲ್ಲಿ ಮಲಗಿದ್ದಾಗ ಅವಳೊಂದಿಗೆ ಜಗಳಾ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕತ್ತರಿಯಿಂದ ಕುತ್ತಿಗೆ ಮತ್ತು ಎದೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಮತ್ತು ಈ ತನತಾಯಿ ಪದ್ಮಾವತಿ ಗಂಡ ಪಾರೀಸ ಮಹೇಶವಾಡಗಿ ಪ್ರಚೋದನೆ ನೀಡಿ ಕೊಲೆ ಮಾಡಸಿದ್ದಾಳೆ ಎಂದು ಮೃತಳ ತಾಯಿ ತೆರದಾಳ ಪೆÇೀಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಸಿದ್ಧಾರ್ಥ ಗೋಯಲ್, ಡಿವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ್, ಪಿ.ಎಸ್.ಐ ಎಸ್.ಕೆ ಸಿಂಗನ್ನವರ್ ಅವರ ಪೆÇಲೀಸ್ ತಂಡ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿದ್ದಾರೆ.