ಮನೆಗಳ್ಳನ ಬಂಧನ; 20.40 ಲಕ್ಷ ಮೌಲ್ಯದ 167 ಗ್ರಾಂ ಚಿನ್ನಾಭರಣ ವಶ

ಕಲಬುರಗಿ,ಡಿ.11: ಕಲಬುರಗಿ ಈಶ್ವರ ನಗರ ಗಾಬರೆ ಲೇಔಟ್ ನಲ್ಲಿ ಕಳೆದ ನವೆಂಬರ್‍ನಲ್ಲಿ ನಡೆದ ಮನೆಗಳ್ಳತನ ಪ್ರಕರಣ ಬೇಧಿಸಿದ ಸ್ಟೇಷನ್ ಬಜಾರ ಪೆÇಲೀಸರು ಮನೆಗಳ್ಳನನ್ನು ಬಂಧಿಸಿ ಆತನಿಂದ 20.40 ಲಕ್ಷ ರೂಪಾಯಿ ಮೌಲ್ಯದ 167 ಗ್ರಾಂ ಚಿನ್ನ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧಾರವಾಡ ಮೂಲದ,ಮಹಾರಾಷ್ಟ್ರ ಪುಣೆಯ ಕಲವಾಡ ಬಸ್ತಿ ಲೋಗಂ ನಿವಾಸಿ, ಅಡುಗೆ ಮಾಡುವ ವೃತ್ತಿಯ ನವೀನ ಗುರುಮೂರ್ತಿ ಜೋಶಿ ( 49) ಎಂಬ ಆರೋಪಿಯನ್ನು ಬಂಧಿಸಲಾಗಿದೆ
ನ.23 ರಂದು ಠಾಣೆಗೆ ದೂರು ಸಲ್ಲಿಸಿದ ನಿವೃತ್ತ ಸರಕಾರಿ ನೌಕರ ಈಶ್ವರ ನಗರ ಗಾಬರೆ ಲೇಔಟ್ ನಿವಾಸಿ ಈರಣ್ಣಾ ಯಲ್ಲಪ್ಪ ಪಟ್ಟೇದಾರ ಎಂಬುವವರು ತಾವು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದಾಗ ಬೀಗ ಮುರಿದು 20.62 ಲಕ್ಷ ರೂ ಬೆಲೆ ಬಾಳುವ ಬಂಗಾರ, ಬೆಳ್ಳಿ ಆಭರಣಗಳು ಮತ್ತು ನಗದು ಹಣ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದೂರು ಸಲ್ಲಿಸಿದ್ದರು.
ಆರೋಪಿತರ ಪತ್ತೆ ಕುರಿತು ಉಪ ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಸಹಾಯಕ ಪೆÇಲೀಸ ಆಯುಕ್ತ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ, ಸ್ಟೇಷನ್ ಬಜಾರ ಪಿ.ಐ ಗುರುಲಿಂಗಪ್ಪ ಎಂ. ಪಾಟೀಲ್ ಅವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಸಿರಾಜ ಪಟೇಲ್, ಪ್ರಭಾಕರ, ಮೋಸಿನ್, ಯಲ್ಲಪ್ಪ, ಶಿವಲಿಂಗ, ಮಲ್ಲಣ್ಣ, ಸಂಗಣ್ಣ, ಸುಮೀತ ಹಾಗೂ ಚನ್ನವಿರೇಶ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ತಂಡ
ವು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಅವರು ವಿವರಿಸಿದರು.