
ಕಲಬುರಗಿ,ಮಾ.29-ಮನೆ ಬೀಗ ಮುರಿದು 93 ಸಾವಿರ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿಕೊಂಡು ಹೋಗಿರುವ ಘಟನೆ ಶಹಾಬಾದ ರಸ್ತೆಯ ಭೋಜಲಿಂಗೇಶ್ವರ ಮಠದ ಹತ್ತಿರ ನಡೆದಿದೆ.
ಗಣಪತರಾಯ ಐಕೂರ ಎಂಬುವವರ ಮನೆ ಬೀಗ ಮುರಿದು 54 ಸಾವಿರ ರೂ.ಮೌಲ್ಯದ ನಾಲ್ಕುವರೆ ತೊಲೆಯ ಬಂಗಾರದ ಕಿವಿಯೋಲೆ, 6 ಸಾವಿರ ರೂ.ಮೌಲ್ಯದ ಅರ್ಧ ತೊಲೆ ಬಂಗಾರದ ಮುತ್ತಿನ ನತ್ತು, 9 ಸಾವಿರ ರೂ.ಮೌಲ್ಯದ 9 ತೊಲೆಯ ಬೆಳ್ಳಿ ಲಕ್ಷ್ಮೀ ಮೂರ್ತಿ, 6 ಸಾವಿರ ರೂ.ಮೌಲ್ಯದ ತಲಾ 2 ತೊಲೆಯ 3 ಲಿಂಗದ ಕಾಯಿ, 4 ಸಾವಿರ ರೂ.ಮೌಲ್ಯದ 4 ತೊಲೆಯ ಬೆಳ್ಳಿ ಕಾಲು ಚೈನ ಮತ್ತು 14 ಸಾವಿರ ರೂ.ನಗದು ಸೇರಿ 93 ಸಾವಿರ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಗಣಪತರಾಯ ಐಕೂರ ಅವರು ಮನೆಗೆ ಬೀಗ ಹಾಕಿಕೊಂಡು ಪತ್ನಿ ಜೊತೆಗೆ ದೇವದುರ್ಗದಲ್ಲಿರುವ ಮಗಳ ಮನೆಗೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.


























