ಅಕ್ಬರ್‌ಗೆ ಗೌರವ ಡಾಕ್ಟರೆಟ್

ಬೆಂಗಳೂರು, ಜು.೯- ಬೆಂಗಳೂರಿನ ಖ್ಯಾತ ಕ್ರೀಡಾ ಅಂಕಣಕಾರ, ಮ್ಯಾರಥಾನ್ ಪಟು ಹಾಗೂ ಬಿಎಂಎಂ ನಿರ್ದೇಶಕ ಗುಲ್ ಮಹಮ್ಮದ್ ಅಕ್ಬರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಚೆನ್ನೈನ ಹೆಸರಾಂತ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿಯೂ ಕ್ರೀಡಾ ಹಾಗೂ ಮ್ಯಾರಥಾನ್ ಗಳನ್ನು ಗುಲ್ ಮಹಮ್ಮದ್ ಅಕ್ಬರ್ ಅವರ ಸಾಧನೆ ಹಾಗೂ ಫೀಟ್ ನೇಸ್ ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗುಲ್ ಮಹಮ್ಮದ್ ಅಕ್ಬರ್, ಮ್ಯಾರಥಾನ್ ದೆಹಿಕ ಶಕ್ತಿಗೆ ಮಾತ್ರವಲ್ಲ, ಮಾನಸಿಕ ವ್ಯಕ್ತಿತ್ವ ವಿಕಸನಕ್ಕೂ ಪ್ರೇರಣೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಮ್ಯಾರಥಾನ್ ನಲ್ಲಿ ಭಾಗಿಯಾಗುವಂತೆ ಮಾಡಿದ್ದೇವೆ. ಈಗ ಇದನ್ನು ಗುರುತಿಸಿ ಡಾಕ್ಟರೇಟ್ ಪ್ರದಾನಿಸಿರುವುದು ಸಂತಸ ತಂದಿದೆ ಎಂದು ನುಡಿದರು.