
ಕಲಬುರಗಿ,ಆ.31-ಗುಲ್ಬರ್ಗ ವಿಶ್ವ ವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಕಲಾ ನಿಕಾಯದವತಿಯಿಂದ ಪ್ರಭಾರ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ಉರ್ದು ವಿಭಾಗದ ಮುಖ್ಯಸ್ಥರು, ಕಲಾ ನಿಕಾಯದ ಡೀನರ್ ಆದ ಪೆÇ್ರ. ಅಬ್ದುಲ್ ರಬ್ ಉಸ್ತಾದ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಇಂಗ್ಲಿಷ್ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ರಮೇಶ ರಾಠೊಡ್ ಅವರು, ಸರಳ ವ್ಯಕ್ತಿತ್ವದ ಪೆÇ್ರ.ರಬ್ ಅವರು ಅಧಿಕಾರ ಸ್ವೀಕರಿಸಿರುವುದು ಖುಷಿ ತಂದಿದೆ. ಮುಂದೆ ಅವರಿಗೆ ಇನ್ನು ಉನ್ನತ ಹುದ್ದೆ ಸಿಗಲಿ ಎಂದು ಶುಭ ಹಾರೈಸಿದರು. ಡಾ.ನಿಂಗಣ್ಣ, ಡಾ.ಮಂಜೂರು ಅಹ್ಮದ್, ಡಾ.ಸಂತೋಷ ಕುಮಾರ ಕಂಬಾರ, ಡಾ.ಫರೀದಾ, ಡಾ.ಶಿವಾನಂದ ಕಡಗಂಚಿ ಡಾ.ಹಣಮಂತ ಮೇಲಕೇರಿ, ಡಾ.ಶುಲಬಾಯಿ ರಬ್ ಅವರ ಕುರಿತು ಮಾತನಾಡಿದರು. ಸಂಗೀತ ವಿಭಾಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಲಾ ನಿಕಾಯದ ಎಲ್ಲಾ ವಿಭಾಗಗಳ ಬೋಧಕ/ಭೋದಕೇತರ ಸಿಬ್ಬಂದಿ ಭಾಗವಹಿಸಿದ್ದರು. ಡಾ. ಎಂ.ಬಿ. ಕಟ್ಟಿ
ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಆಕಾಶ್ ತಡಕಲ್ ವಂದಿಸಿದರು.