Home ಜಿಲ್ಲೆ ಕಲಬುರಗಿ ಪ್ರಾಮಾಣಿಕ ಶ್ರಮದ ಸೇವೆಯೇ ಯಸಸ್ಸಿನ ಗುಟ್ಟು : ನ್ಯಾಯವಾದಿ ಭೃಂಗಿಮಠ

ಪ್ರಾಮಾಣಿಕ ಶ್ರಮದ ಸೇವೆಯೇ ಯಸಸ್ಸಿನ ಗುಟ್ಟು : ನ್ಯಾಯವಾದಿ ಭೃಂಗಿಮಠ

ಕಲಬುರಗಿ,ಮಾ.30-ಪ್ರಾಮಾಣಿಕತೆಯಿಂದ ಸತತ ಶ್ರಮವಹಿಸಿದರೆ ಯಸಸ್ಸು ಸಿಗುತ್ತದೆ ಎಂದು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ಅವರು ನಗರದ ಸುಲ್ತಾನಪುರ ಮಹಾಲಕ್ಷ್ಮಿ ಮಂದಿರ ಹತ್ತಿರದ ವಿಜಯ ನಗರದಲ್ಲಿ ಅಭಿಮಾನಿ ಬಳಗವು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಿ ಪ್ರಮಾಣಿಕತೆ,ಸತ್ಯ ಮತ್ತು ಮೌಲ್ಯಯುತ ತತ್ವಗಳಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಇಲ್ಲವಾದರೆ ಸತ್ಯ ನಾಶವಾಗಿ ಸಮಾಜ ಅಧೋಗತಿಗೆ ಹೋಗುತ್ತದೆ ಎಂದು ಎಚ್ಚರಿಸಿದ ಭೃಂಗಿಮಠ ಅವರು ಪ್ರಜಾಪ್ರಭುತ್ವದ ಮೂಲ ತತ್ವವೇ ಪ್ರಮಾಣಿಕತೆ ಈ ಹಾದಿಯಲ್ಲೇ ಪ್ರತಿಯೊಬ್ಬರು ಸಾಗಬೇಕು ಆಗ ಮೌಲ್ಯಗಳ ರಕ್ಷಣೆ ಆಗುತ್ತವೆ ಎಂದರು.
ಯಾರು ಕಾನೂನು ಪಾಲಿಸುವರೋ ಅವರಿಗೆ ಕಾನೂನು ರಕ್ಷಣೆ ನೀಡುತ್ತದೆ , ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸತ್ಯವಂತರ ಮೇಲೆ ಬರಿ ಸುಳ್ಳು ಕೇಸು ಹಾಕುತ್ತಿರುವುದು ಕಂಡು ಬರುತ್ತಿದ್ದು ಇದು ಉತ್ತಮ ಬೆಳವಣಿಗೆ ಅಲ್ಲ, ಸುಳ್ಳು ವಿಜೃಂಭಿಸಿದರೆ ಸತ್ಯಕ್ಕೆ ಕೊಡಲೆ ಪೆಟ್ಟು ಬೀಳುತ್ತದೆ ಎಂದು ತಿಳಿಸಿದರು.
ಯುವ ಹೋರಾಟಗಾರ ಶ್ರೀಧರ ಪಾಟೀಲ ಮಾತನಾಡಿ ಸತ್ಯಮೇವ ಜಯತೆ ಮಂತ್ರ ಪಠಿಸಿ ಸತ್ಯವಾದಿಗಳಾಗಿ ಬಾಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಅಂದಾಗ ಮಾತ್ರ ಸಮಾಜದ ಉತ್ತಮ ಸ್ವಾಸ್ತ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದರು.
ಯುವ ಹೋರಾಟಗಾರ ನ್ಯಾಯವಾದಿ ರಾಜು ಹಿರೇಮಠ ಅವರು ಮಾತನಾಡಿ ಗುರು ಹಿರಿಯರು ಹಾಕಿಕೊಟ್ಟ ಉತ್ತಮ ಮಾರ್ಗದಲ್ಲಿ ಎಲ್ಲರೂ ಸಾಗಬೇಕು, ಅನ್ಯಾಯದ ವಿರುದ್ಧ ಧೈರ್ಯದಿಂದ ಹೋರಾಡುವ ಯುವಕರ ಪಡೆ ಇಂದಿನ ದಿನಮಾನಗಳಲ್ಲಿ ಕಟ್ಟಿ ಸಮಾಜ ಸುಧಾರಣೆ ಮಾಡುವುದು ಅಗತ್ಯವಾಗಿದೆ, ಎಂದ ಅವರು ನ್ಯಾಯವನ್ನು ಕಾಪಾಡಲು ಸತತ ಪ್ರಯತ್ನ ಮಾಡುವೆ, ಕಷ್ಟವೇ ಇರಲಿ ಸುಖಃವೆ ಬರಲಿ ನ್ಯಾಯುತವಾದ ಸಮಾಜ
ನಿರ್ಮಾಣಕ್ಕಾಗಿ ಪ್ರಯತ್ನಿಸಿ, ಭರತ ಭೂಮಿಯನ್ನು ರಕ್ಷಿಸಿವೆ ಎಂದರು, ಹಿರಿಯರಾದ ವಿಜಯಾದೇವಿ ಪಾಟೀಲ, ಹಾಗೂ ಶರಣಗೌಡ ಪಾಟೀಲ, ಅಂಬಾರಾಯ ಧರಿ, ಮಾಹಾದೇವ ಗಣಜಲಖೇಡ್, ಮಲ್ಲು ಗಣಜಲಖೇಡ ಇತರರು ಉಪಸ್ಥಿತರಿದ್ದರು.