ಚಿಂಚೋಳಿಯಲ್ಲಿ ಹೋಳಿ ಹಬ್ಬ,ರಂಜಾನ್ ಶಾಂತಿ ಸಭೆ

ಚಿಂಚೋಳಿ,ಮಾ.1: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬ ಆಚರಣೆ ಕುರಿತು ಶಾಂತಿ ಸಭೆ ಜರುಗಿತು.ಡಿಎಸ್‌ಪಿ ಸಂಗಮನಾಥ ಹಿರೇಮಠ ಅವರ ನೇತೃತ್ವದಲ್ಲಿ ಜರುಗಿತು. ಸಭೆ ಉದ್ದೇಶಿಸಿ ಅವರು ಮಾತನಾಡಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಬೇಕು ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಸಹಕರಿಸಬೇಕು ಎಲ್ಲಾ ಯುವಕರು ನಿಯಮಗಳನ್ನು ಪಾಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಬೇಕು. ಹೋಳಿ ಹಬ್ಬ ನಮ್ಮ ಪರಂಪರೆಯ ಭಾಗವಾಗಿದ್ದು, ಎಲ್ಲರೂ ಒಂದಾಗಿ ಸಹೋದರತ್ವದಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ, ಕಾನೂನಾತ್ಮಕವಾಗಿ ಹೋಳಿ ಹಬ್ಬ ಆಚರಿಸುತ್ತೇವೆ.ಇದೇ ತಿಂಗಳಲ್ಲಿ ಬರುವ ರಂಜಾನ್ ಮುಸ್ಲಿಮರ ದೊಡ್ಡ ಹಬ್ಬವಾಗಿದ್ದು ಎರಡು ಹಬ್ಬಗಳು ಒಂದೇ ತಿಂಗಳಲ್ಲಿ ಬಂದಿದ್ದು ಪೊಲೀಸ್ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಶಾಂತಿ ಸಭೆ ಕರೆಯಲಾಗುತ್ತಿದ್ದು ಆ ಶಾಂತಿ ಸಭೆಗೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷವಾಗುತ್ತಿದೆ ಅದೇ ರೀತಿ ಎರಡು ಹಬ್ಬ ಶಾಂತಿಯುತವಾಗಿ ಆಚರಣೆ ಮಾಡಬೇಕೆಂದು ಹೇಳಿದರು ಸಭೆಯಲ್ಲಿ ಸಿಪಿಐ ಕಪಿಲದೇವ, ಪಿಎಸ್ ಐ ಗಂಗಮ್ಮ, ಸೇರಿದಂತೆ ಅನೇಕ ವಿವಿಧ ಪಕ್ಷದ ಮುಖಂಡರು ಹಾಗೂ ಹಿಂದೂ ಮತ್ತು ಮುಸ್ಲಿಂ ಸಮಾಜದವರು ಮತ್ತು ಪೊಲೀಸ್ ಠಾಣೆಯ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು