ಹೋಳಿ ಹಾಗೂ ರಂಜಾನ್ ಶಾಂತಿ ಸಭೆ

ಚನ್ನಮ್ಮನ ಕಿತ್ತೂರು, ಮಾ4: ಹೋಳಿ ಮತ್ತು ರಂಜಾನ್ ಹಬ್ಬಗಳು ಬಂದಿದ್ದು. ಈ ಎರಡು ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಶಾಂತಿಯುತವಾಗಿ ಸಡಗರ ಸಂಭ್ರಮದಿಂದ ಆಚರಿಸಲು ಎಲ್ಲರೂ ಸಹಕರಿಸಬೇಕೆಂದು ಸಿಪಿಐ ಶಿವಾನಂದ ಗುಡಗನಟ್ಟಿ ಹೇಳಿದರು.

ಸ್ಥಳಿಯ ಪೋಲಿಸ್ ಠಾಣೆ ಅಂಗಳದಲ್ಲಿ ಪೋಲಿಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಹೋಳಿ ಮತ್ತು ರಂಜಾನ್ ಹಬ್ಬಗಳ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಂತತೆ ಕಾಪಾಡಿಕೊಂಡು ಹಬ್ಬ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ತಾಲೂಕಾಧ್ಯಂತ ಹಲವು ವರ್ಷಗಳಿಂದ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ  ಈ ಬಾರಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲ ಸಂಘಟನೆಯವರು, ಸಾರ್ವಜನಿಕರು ಕ್ರಮ ಕೈಗೊಳ್ಳಬೇಕು ಈಗಾಗಲೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಬೇಕಾಬಿಟ್ಟಿಯಾಗಿ ಬಣ್ಣ ಎರಚಿ ಕುಡಿದು ಅಮಲಿನಲ್ಲಿ ಬೇಕಾಬಿಟ್ಟಿ ಬೈಕ್ ಓಡಿಸಿ ಯಾರಿಗೂ ತೊಂದರೆ ಕೊಡಬೇಡಿ ರಸಾಯನಿಕ ಮುಕ್ತ ಬಣ್ಣ ಖರೀದಿ ಬಣ್ಣ ಆಚರಿಸಿ ಅಂತಹದ್ದೇನು ಅಹಿತಕರ ಘಟಣೆ ಕಂಡುಬಂದರೆ ಸೂಕ್ತ ಕಾನುನೂ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. 

ಪಿಎಸ್‍ಐ ಪ್ರವೀಣ ಗಂಗೋಳ ಮಾತನಾಡಿ ನಾವೆಲ್ಲರೂ ಒಂದೇ ಎಂಬ ಭಾವೈಕ್ಯೆತೆಯಿಂದ ಶಾಂತಿಯುತವಾಗಿ ಹಬ್ಬ ಆಚರಿಸುವುದರಿಂದ ನಮ್ಮೆಲ್ಲರಿಗೂ ಒಳ್ಳೆಯದು ಎಂದರು.

ತಹಶೀಲ್ದಾರ ಕಲ್ಲನಗೌಡ ಪಾಟೀಲ, ಕ್ರೈಂ ಪಿಎಸ್‍ಐ ಗಂಗಾಧರ ಹಂಪನ್ನವರ, ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ, ಅಪ್ಪೇಶ ದಳವಾಯಿ, ಮೃತ್ಯುಂಜಯ ಮಾರಿಹಾಳ, ಪ್ರವೀಣ ಸರದಾರ, ಸಂತೋಷ ಪರೀಟ್, ಶಿವು ಹಿರೇಮಠ, ದಿನೇಶ ಒಳಸಂಗ, ಚಂದ್ರಗೌಡ ಪಾಟೀಲ, ಅಗ್ನಿಶಾಮಕ, ಸಾರ್ವಜನಿಕರು ಸೇರಿದಂತೆ ಇನ್ನಿತರರಿದ್ದರು.