
ಕಲಬುರಗಿ,ಸೆ.27-ಇಲ್ಲಿನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಿಂಗಾರು ಬೀಜ ದಿನೋತ್ಸವ ಆಚರಿಸಲಾಯಿತು.
ವಿವಿಧ ಗ್ರಾಮಗಳಿಂದ ಸುಮಾರು 80 ಜನ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಹಿಂಗಾರು ಹಂಗಾಮಿನ ಸಿದ್ಧತೆ, ತಳಿಗಳ ಮತ್ತು ತಾಂತ್ರಿಕತೆಗಳ ಬಗ್ಗೆ ವಿವಿರವಾಗಿ ಮಾಹಿತಿ ನೀಡಲಾಯಿತು.
ಇದಲ್ಲದೇ ತೊಗರಿ ಬೀಜೋತ್ಪಾದನೆ, ಸುಧಾರಿತ ಬೇಸಾಯ ಕ್ರಮಗಳ ಹಾಗೂ ಬೀಜೋಪಚಾರದ ಮಾಹಿತಿಯನ್ನು ತಿಳಿಸಿಕೊಡಲಾಯಿತು. ಇದಲ್ಲದೆ ಬೆಳೆಗಳಿಗೆ ತಗಲುತ್ತಿರುವ ರೋಗಗಳ ನಿಯಂತ್ರಣ ಮತ್ತು ಕೀಟಗಳ ನಿರ್ವಹಣೆ ಕುರಿತು ಸಂಬಂಧಿಸಿದ ವಿಜ್ಞಾನಿಗಳಿಂದ ಮಾಹಿತಿ ನೀಡಲಾಯಿತು. ನೂತನ ತಳಿಗಳ ಬಳಕೆಯಲ್ಲಿ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪಲ್ಸ್ ಮ್ಯಾಜಿಕ್ ಮತ್ತು ಚಿಕ್‍ಪಿ ಮ್ಯಾಜಿಕ ಮತ್ತು ಜೈವಿಕ ಗೊಬ್ಬರಗಳ ಬಳಸುವ ವಿಧಾನವನ್ನು ತಿಳಿಸಿಕೊಡಲಾಯಿತು.
ಅತಿಥಿಗಳಾಗಿ ಆಗಮಿಸಿದ್ದ ವಲಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಬಿ.ಎಸ್.ರೆಡ್ಡಿ ಅವರು ರೈತರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಹಿರಿಯ ವಿಜ್ಞಾನಿಗಳಾದ (ಸಸ್ಯರೋಗಶಾಸ್ತ್ರ) ಡಾ.ಮಲ್ಲಿಕಾರ್ಜುನ ಕೆಂಗನಾಳ, ಮತ್ತು ಡಾ. ಶೋಭರಾಣಿ ಎಂ. ಅವರು ವಹಿಸಿಕೊಂಡಿದ್ದರು. ಕೇಂದ್ರದ ವಿಜ್ಞಾನಿಗಳಾದ ಡಾ. ಬಸವರಾಜ ಕೆ., ಹಿರಿಯ ವಿಜ್ಞಾನಿ (ಮಣ್ಣು ವಿಜ್ಞಾನ), ಡಾ. ಪ್ರಿಯಾಂಕ, (ಸೂಕ್ಷ್ಮಾಣುಜೀವ ಶಾಸ್ತ್ರ), ಡಾ. ಲಕ್ಷುಮಣ, (ತಳಿ ವರ್ಧಕ), ಡಾ. ಆನಂದ ಪೋಲೀಸ ಪಾಟೀಲ, (ಬೇಸಾಯಶಾಸ್ತ್ರ), ಡಾ. ನಿಂಗಪ್ಪ, (ಬೇಸಾಯಶಾಸ್ತ್ರ) ಮತ್ತು ಡಾ.ಶರಣಬಸಪ್ಪ ಏರಿ, (ಜೈವಿಕ ತಾಂತ್ರಿಕ ಶಾಸ್ತ್ರ) ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಮಾಹಿತಿಯನ್ನು ಒದಗಿಸಿದರು. ಅನೇಕ ಪ್ರಗತಿ ಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡರು.