
ಕೋಲಾರ.ಏ,೩- ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ವತಿಯಿಂದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರಹೆಗ್ಗಡೆಯವರ ಧರ್ಮ ಪತ್ನಿ ಮಾತೃಶ್ರೀ ಹೇಮಾವತಿ ಅಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಹಣ್ಣು ಹಂಪಲು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಟ್ಟಸ್ಟ್‌ನ ಜಿಲ್ಲಾ ನಿರ್ದೇಶಕರಾದ ಶಿವಾನಂದ ಆಚಾರ್ಯರವರ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ತಾಲ್ಲೂಕಿನ ಮುದುವತ್ತಿ ಕಾರ್ಯಕ್ಷೇತ್ರದಲ್ಲಿ ಅಮರಮ್ಮನವರಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿ ಕೋಲಾರ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ೫೪೦ ಮಂದಿ ಅಸಹಾಯಕರಿಗೆ, ನಿರ್ಗತಿಕರಿಗೆ ಪ್ರತಿ ತಿಂಗಳು ರೂ ೧೦೦೦ ರಿಂದ ೨ ೦೦೦ ವರೆಗೆ ಮಾಶಾಸನ ನೀಡುತ್ತಿದ್ದು, ಪೌಷ್ಟಿಕ ಆಹಾರ,ಕಿಟ್ ವಿತರಣೆ ಮತ್ತು ವಾತ್ಸಲ್ಯ ಕಿಟ್ ನೀಡಿ ಇವರುಗಳ ಬಗ್ಗೆ ಅತಿಯಾದ ಕಾಳಜಿ ವಹಿಸಿ ವೃದ್ದಾಪ್ಯ ಸಂದರ್ಭದಲ್ಲಿ ಇವರ ಜೀವನೋಪಾಯಕ್ಕೆ ದಾರಿ ದೀಪವಾಗಿರುತ್ತಾರೆ ಹಾಗೂ ರಾಜ್ಯಾದಾದ್ಯಂತ ಸಾವಿರಾರು ಅಸಹಾಯಕರಿಗೆ ನಿರ್ಗತಿಕರಿಗೆ ವಾತ್ಸಲ್ಯ ಫಲಾನುಭವಿಗಳಿಗೆ ಏಕಕಾಲದಲ್ಲಿ ಹಣ್ಣುಗಳನ್ನು ವಿತರಿಸಿ ಅಮ್ಮನವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ ಟಿ.ಎಸ್. ಜಿಲ್ಲಾ ಯೋಜನಾಧಿಕಾರಿ ಗಿರೀಶ್ ಮತ್ತು ವಲಯದ ಮೇಲ್ವಿಚಾರಕರಾದ ಕಾಂತರಾಜ್, ಕೃಷಿ ಮೇಲ್ವಿಚಾರಕ ಗೋವಿಂದ ನಾಯಕ್, ತಾಲ್ಲೂಕು ವಿಚಕ್ಷಣಾಧಿಕಾರಿ ಅಶ್ವಥ್, ವಲಯದ ಸೇವಾಪ್ರತಿನಿಧಿಗಳು ಮತ್ತು ಊರಿನ ಪ್ರಮುಖರ ಉಪಸ್ಥಿತಿಯಲ್ಲಿ ಹಣ್ಣು ಮತ್ತು ಹಂಪಲು ಹಂಚುವ ಮೂಲಕ ಅಮ್ಮನವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು























