ಟಾವಿ ಮೂಲಕ ಹೃದಯ ಚಿಕಿತ್ಸೆ ಯಶಸ್ವಿ

ಕೆ.ಆರ್.ಪುರ, ಫೆ.೨೪- ಹೃದಯ ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ ಟಾವಿ ಮೂಲಕ ಯಶಸ್ವಿ ಹೃದಯ ಚಿಕಿತ್ಸೆ ಮಾಡಲಾಗಿದೆ ಎಂದು ಡಾ.ನಾಗಶ್ರೀನಿವಾಸ್ ಅವರು ತಿಳಿಸಿದರು.

ವೈಟ್ ಮೆಡಿಕವರ್ ಆಸ್ಪತ್ರೆಯಲ್ಲಿ ೭೨ವರ್ಷದ ವ್ಯಕ್ತಿಗೆ ಹೃದಯ ಶಸ್ತ್ರಚಿಕಿತ್ಸೆಯ ಪರ್ಯಾಯವಾಗಿ ಟಾವಿ ಮೂಲಕ ಯಶಸ್ವಿಚಿಕಿತ್ಸೆ ನೀಡಿದ್ದು, ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಅಕಸ್ಮಿಕವಾಗಿ ತೀವ್ರ ಉಸಿರಾಟದ ತೊಂದರೆಯೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗೆ ಗಂಭೀರ ಕ್ಯಾಲ್ಸಿಫಿಕ್ ಆಓರ್ಟಿಕ್ ಸ್ಟೆನೋಸಿಸ್ (ಫಂಕ್ಷನಲ್ ಬೈಕಸ್ಪಿಡ್ ವಾಲ್ವ್) ಎಂದು ಪತ್ತೆಯಾಯಿತು.

ಪ್ರಾಥಮಿಕವಾಗಿ ನಡೆಸಿದ ಕೊರೊನರಿ ಆಂಜಿಯೋಗ್ರಫಿನಲ್ಲಿ ಸಾಮಾನ್ಯ ಕೊರೊನರಿ ಧಮನಿಗಳು ಇರೋ ಕಂಡು ಬಂದಿತ್ತು. ಆದರೆ ರೋಗಿಯ ಸ್ಥಿತಿಯನ್ನು ಪರಿಗಣಿಸಿ ಆರಂಭದಲ್ಲಿ ಸಂರಕ್ಷಣಾತ್ಮಕ ಚಿಕಿತ್ಸೆ ನೀಡಲಾಗಿದ್ದು, ತುರ್ತಾಗಿ ಟಾವಿ ವಿಧಾನವನ್ನು ಮಾಡಲು ಸಲಹೆ ನೀಡಲಾಯಿತು.

ಈ ಟಾವಿ ವಿಧಾನವನ್ನು ಮೆಡಿಕವರ್ ಆಸ್ಪತ್ರೆಯ ಹಿರಿಯ ಹೃದಯ ತಜ್ಞರು ಹಾಗೂ ಕಾರ್ಡಿಯಾಕ್ ಸೈನ್ಸಸ್ ನಿರ್ದೇಶಕರಾದ ಡಾ. ನಾಗ ಶ್ರೀನಿವಾಸ್ ಯಶಸ್ವಿಯಾಗಿ ನೆರವೇರಿಸಿದರು.
ರೋಗಿಯನ್ನು ವೆಂಟಿಲೇಟರ್‌ನಿಂದ ಯಶಸ್ವಿಯಾಗಿ ಬೇರ್ಪಡಿಸಿ, ಸೂಕ್ತ ಮೇಲ್ವಿಚಾರಣೆ ಮತ್ತು ಹೃದಯ ಪುನರ್ವಸತಿ ಚಿಕಿತ್ಸೆ ನೀಡಲಾಯಿತು. ಪ್ರಸ್ತುತ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.