
ಸತ್ತೂರು,ಆ25 : ಮಾನವ ತಪ್ಪು ಮಾಡುವುದು ಸಹಜ. ಆ ತಪ್ಪು ಕಾಯಕವಾಗಿರಲಿ, ವಾಚನಿಕವಾಗಿರಲಿ ಅಥವಾ ಮಾನಸಿಕವಾಗಿರಲಿ ಅಪರಾಧವೆನಿಸುತ್ತದೆ . ಕಾಯಿಕ, ವಾಚನಿಕ ಅಪರಾಧಗಳಲ್ಲಿ , ಮನಸ್ಸು ಹಿರಿಯ ಅಪರಾಧವೆಂದೆನಿಸುತ್ತದೆ .ಈ ಹಿರಿದಾದ ಮನಸ್ಸಿನ ಅಪರಾಧ ಅಥವಾ ತಪ್ಪನ್ನು ದಂಡಿಸಲು ಲೌಕಿಕವಾಗಿ ಯಾವ ಕಾನೂನುವಿಲ್ಲ. ಅಲೌಕಿಕವಾದ, ಪಾರಮಾರ್ಥಿಕವಾದ ಶಾಸ್ತ್ರವೆಂಬ ಕಾನೂನಿನಲ್ಲಿ, ದಂಡನೆಯಿಂದ ಪಾರಾಗಲು, ಭಾಗವತ ಕಥಾ ಶ್ರವಣ ಮಾಡಬೇಕು ಎಂದು ಡಾ. ಭೀಮಸೇನಾಚಾರ್ಯ ಮಳಗಿ ಅವರು ತಿಳಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಶ್ರೀ ನಾಗೇಶ ನರಸಾಪುರ ಇವರ ನಿವಾಸದಲ್ಲಿ ಜರುಗಿದ ” ಭಾಗವತದ ಶ್ರವಣ ಏಕೆ? ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ದೈಹಿಕ ತಪ್ಪಿಗೆ ,ದೈಹಿಕ ದಂಡನೆ ಇದೆ, ತೀರ್ಥಯಾತ್ರೆಗಳು ಇವೆ. ಅದರಂತೆ ವಾಚನಿಕ ತಪ್ಪಿಗೆ ವಾಚನಿಕ ದಂಡನೆ ಇದೆ. ಪ್ರಾಯಶ್ಚಿತ್ತಕ್ಕಾಗಿ ಭಗವಂತನ ನಾಮಸ್ಮರಣೆ ಇದೆ ಆದರೆ ಮನಸ್ಸು ಮಾಡಿದ ತಪ್ಪು ಮನಸ್ಸಿಗೆ ಮಾತ್ರ ತಿಳಿಯುವಂತದ್ದು, ಆಶ್ಚರ್ಯವೆಂದರೆ ಭಗವಂತನ ಕಾನೂನಿನಲ್ಲಿ ಇಂತಹ ತಪ್ಪಿಗೂ ಕೂಡ ಶಿಕ್ಷೆ ಇದ್ದೆ ಇದೆ, ಆದರೆ ದಂಡನೆ ಇಂತಹ ತಪ್ಪಿಗೆ ಇಂತಹ ದಂಡನೆ ಎಂದು ಹಲವು ಸಂದರ್ಭಗಳಲ್ಲಿ ನಮಗೆ ತಿಳಿಯದು. ಇಂತಹ ತಪ್ಪಿನ ಶಿಕ್ಷೆಯಿಂದ ಪಾರಾಗಲು, ಮನಸ್ಸಿನ ತುಂಬಾ ಭಗವಂತನನ್ನು ತುಂಬಿಸಿಕೊಳ್ಳಲು, ಭಾಗವತದ ಕಥಾ ಶ್ರವಣ ಅತ್ಯವಶ್ಯಕ ಎಂದು, ಲೌಕಿಕವಾಗಿ ಉದಾಹರಣೆಗಳೊಂದಿಗೆ ಸುಂದರವಾಗಿ ವರ್ಣಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ ಮಾಡಿದರು . ಶ್ರೀ ಕೃಷ್ಣ ಹುನಗುಂದ, ಡಿ ಕೆ ಜೋಶಿ, ಕೇಶವ ಕುಲಕರ್ಣಿ, ಸಂಜೀವ ಗೋಳಸಂಗಿ, ಧೀರೇಂದ್ರ ತಂಗೋಡ, ಹನುಮಂತ ಪುರಾಣಿಕ, ಪೆÇ್ರ. ಸಿ ಕೆ ಕುಲಕರ್ಣಿ,ಬದ್ರಿನಾಥ ಬೆಟಿಗೇರಿ ಆನಂದ ದೇಶಪಾಂಡೆ, ಕಟ್ಟಿ, ಅನಿಲ್ ಪುರೋಹಿತ, ಪೆÇ್ರ. ಸಿ ಕೆ ಕುಲಕರ್ಣಿ, ವಾದಿರಾಜ ಆಚಾರ, ಪಾಂಡುರಂಗ ಕುಲಕರ್ಣಿ, ಡಾ, ರವಿ ಧುಮ್ಮವಾಡ, ಡಾ. ಶ್ರೀನಾಥ ಶ್ರೀನಿವಾಸ್ ಪಟ್ಟಣಕುಡಿ, ವೆಂಕಟೇಶ ಕುಲಕರ್ಣಿ, ಭೀಮಸೇನ ದಿಗ್ಗಾವಿ ಉಪಸಿತರಿದ್ದರು.