
ಜೇವರಗಿ,ಫೆ 22: ತಾಲೂಕಿನ ಕೋಳಕೂರ ಗ್ರಾಮದ ಪ್ರೌಢಶಾಲೆಗೆ ಹೋಗುವ ರಸ್ತೆಗೆ ಕೆ ಕೆ ಆರ್ ಡಿ ಬಿ ಅನುದಾನದಲ್ಲಿ ಸುಮಾರು 20 ಲಕ್ಷದ,ಸಿ ಸಿ ರಸ್ತೆ ಕಾಮಗಾರಿ ಸುಮಾರು 9 ತಿಂಗಳಿಂದ ಬರಿ ಜಲ್ಲಿಕಲ್ಲು ಹಾಕಿ ನಿಲ್ಲಿಸಿದ್ದು,ಅದನ್ನು ವಿರೋಧಿಸಿ ಕಳೆದ ಜನವರಿ 24 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕ ಸಿದ್ರಾಮ ಕಟ್ಟಿ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಕೂಡಿ ಜಲ್ಲಿಕಲ್ಲು ಹಾಕಿರುವ ರಸ್ತೆಯ ಮೇಲೆ ನಿಂತು ಸಂಬಂಧಪಟ್ಟ ಭೂಸೇನಾ ನಿಗಮದ ಅಧಿಕಾರಿಗಳಿಗೆ ಮತ್ತು ತಾಲೂಕಿನ ಶಾಸಕರು ಕೆ ಕೆ ಆರ್ ಡಿ ಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ರವರಿಗೆ ದೂರವಾಣಿ ಮೂಲಕ ಗಮನಕ್ಕೆ ತರಲಾಗಿತ್ತು.ಹಾಗೆ ತಾಲೂಕಿನ ಹಲವಾರು ಪ್ರಮುಖ ನಾಯಕರ ಗಮನಕ್ಕೂ ತರಲಾಗಿದ್ದು,ಅವರೆಲ್ಲರ ಒತ್ತಾಯದ ಮೇರೆಗೆ ಕೇವಲ 15 ದಿನಗಳಲ್ಲಿ ಸರ್ಕಾರಿ ಪ್ರೌಢಶಾಲೆಗೆ ಹಾಗೂ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಸಂಪೂರ್ಣವಾಗಿ ಸಿ ಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಕಾಮಗಾರಿಗೆ ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ಆದೇಶಿಸಿರುವ ತಾಲೂಕಿನ ಶಾಸಕರಿಗೂ ಹಾಗೂ ಕಾಮಗಾರಿ ತಕ್ಷಣ ನಿರ್ಮಾಣ ಮಾಡುವಂತೆ ಭೂಸೇನಾ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಎಲ್ಲರಿಗೂ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ, ಹಾಗೂ ಶಿಕ್ಷಕರ ಪರವಾಗಿ ತಾಲೂಕು ದಲಿತ ಸಂಘರ್ಷ ಸಮಿತಿ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದೆ



























