Home ಜಿಲ್ಲೆ ಕಲಬುರಗಿ ಅಷ್ಟಗಾ ಗ್ರಾಮದಲ್ಲಿ ಹನುಮಾನ ಜಾತ್ರಾ ಮಹೋತ್ಸವ

ಅಷ್ಟಗಾ ಗ್ರಾಮದಲ್ಲಿ ಹನುಮಾನ ಜಾತ್ರಾ ಮಹೋತ್ಸವ

ಕಲಬುರಗಿ,ಮಾ.30: ಜಿಲ್ಲೆಯ ಅಷ್ಟಗಾ ಗ್ರಾಮದ ಶ್ರೀ ಹನುಮಂತ ದೇವರ 25ನೇ ಜಾತ್ರಾ ಮಹೋತ್ಸವವನ್ನು ಏ.1 ರಂದು ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಲಾಗುವದು.
ಆ ದಿನ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜೆಗಳು ಹಾಗೂ ಅಲಂಕಾರ, ಮಹಾಭಿಷೇಕ, ಮಹಾಮಂಗಳಾರತಿ ಕಾರ್ಯಕ್ರಮಗಳು ನೆರವೇರಿಸಲ್ಪಡುವುದರೊಂದಿಗೆ, ಸಂಜೆ 6 ಗಂಟೆಗೆ ಶ್ರೀ ಹನುಮಂತ ದೇವರ ಭವ್ಯ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಈ ಮಹೋತ್ಸವದ ಪೂಜಾ ಕಾರ್ಯಕ್ರಮಗಳನ್ನು ಪ್ರಧಾನ ಅರ್ಚಕರಾದ ರಾಮಾಚಾರ್ಯ ಘಂಟಿ ಅವರು ನೆರವೇರಿಸಲಿದ್ದಾರೆ.ಈ ಮಹೋತ್ಸವದ ಸಮಗ್ರ ವ್ಯವಸ್ಥೆಯನ್ನು ದಿಲೀಪ ಕುಮಾರ ಕುಲಕರ್ಣಿ ಅಷ್ಟಗಿ ನಿರ್ವಹಿಸುತ್ತಿದ್ದಾರೆ.ಎಲ್ಲಾ ಭಕ್ತರು ಕುಟುಂಬ ಸಮೇತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಹನುಮಂತ ದೇವರ ದಿವ್ಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.