
ಬೇಕಾಗುವ ಸಾಮಗ್ರಿಗಳು
*ಹಿದಕವರೆ ಕಾಳು ೨೫೦
*ಮಟನ್ ೧/೪ ಕೆ.ಜಿ, *ಈರುಳ್ಳಿ ೨
*ಬೆಳ್ಳುಳ್ಳಿ – ೧, ಶುಂಠಿ ತುರಿ ೧ ಚಮಚ
*ಚಕ್ಕೆ -೨ ಪೀಸ್, *ಲವಂಗ -೪
*ಹಸಿರು ಮೆಣಸಿನಕಾಯಿ – ೬, *ಒಣಮೆಣಸಿನ ಕಾಯಿ ೭
*ಧನಿಯಾ ಪುಡಿ ೧ ಚಮಚ, ಗಸಗಸೆ – ೧/೨ ಚಮಚ
*ತೆಂಗಿನಕಾಯಿ ತುರಿ – ೧/೨ ಕಪ್
*ಕೊತ್ತಂಬರಿ ಸೊಪ್ಪು – ಸ್ವಲ್ಪ, ಅರಿಶಿಣ ೧ ಚಮಚ
*ಟೊಮೆಟೊ – ೨, *ಮೆಂತ್ಯ ಸೊಪ್ಪು – ಸ್ವಲ್ಪ
*ಉಪ್ಪು – ರುಚಿಗೆ ತಕ್ಕಷ್ಟು, *ಎಣ್ಣೆ -೫ ಚಮಚ
ಮಾಡುವ ವಿಧಾನ :
ಪ್ಯಾನ್‌ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಚಕ್ಕೆ, ಲವಂಗ, ಹಸಿರು ಮೆನಸಿನಕಾಯಿ, ಒಣಮೆಣಸಿನಕಾಯಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿಯನ್ನು ಒಂದೊಂದಾಗಿ ಹಾಕುತ್ತಾ ಹಸಿವಾಸನೆ ಹೋಗುವವರೆಗೆನ ಹುರಿಯಿರಿ. ನಂತರ ಧನಿಯಾ ಪುಡಿ, ಗಸಗಸೆ, ತೆಂಗಿನಕಾಯಿ ತುರಿಯನ್ನು ಮಿಕ್ಸ್ ಮಾಡಿ. ಹುರಿದಿರುವುದನ್ನು ಕೊತ್ತಂಬರಿ ಮತ್ತು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕುಕ್ಕರ್‌ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಹಿದಕವರೆ ಕಾಳು, ಅರಿಶಿಣ, ಮಟನ್ ಪೀಸ್ ಹಾಕಿ, ರುಬ್ಬಿಕೊಂಡಿರುವ ಮಸಾಲೆಯನ್ನು ಬೆರೆಸಿ ಕಲಸಿ. ನಂತರ ಟೊಮೆಟೊ, ಮೆಂತ್ಯ ಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ೩ ವಿಷಲ್ ಕೂಗಿಸಿದರೆ, ಹಿದಕವರೆ ಮಟನ್ ಸಾರು ರೆಡಿ.