ಫೆ.6ರಂದು ಶ್ರೀನಿವಾಸ ಸರಡಗಿ ಮಹಾಲಕ್ಷ್ಮೀ ಶಕ್ತಿ ಪೀಠದಲ್ಲಿ ಭವ್ಯ ರಥೋತ್ಸವ

ಕಲಬುರಗಿ: ಫೆ.4:ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಕ್ಷ್ಮೀ ಶಕ್ತಿ ಪೀಠದ 39ನೇ ಸಂಭ್ರಮದ ಜಾತ್ರಾ ಮಹೋತ್ಸವ ಅಂಗವಾಗಿ ಫ್ರೇ. 6.ರಂದು ಸಾಯಂಕಾಲ 6.30. ಕ್ಕೆ ಭವ್ಯ ರಥೋತ್ಸವ, ಭಾವೈಕ್ಯ ಧರ್ಮಸಭೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವವು. ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಇವರ ಅಪ್ಪಣೆಯ ಮೇರೆಗೆ ಜರಗಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವದು.
ತೇರಿನಮಠ, ಬಡದಾಳದ ಶ್ರೀ ಷ.ಬ್ರ. ಡಾ. ಚನ್ನಮಲ್ಲ ಶಿವಾಚಾರ್ಯರು, ಜೈ ಭಾರತ ಮಾತಾ ಸೇವಾ ಟ್ರಸ್ಟ್ ನವದೆಹಲಿ ಅಧ್ಯಕ್ಷ ಪೂಜ್ಯ ಶ್ರೀಶ್ರೀಶ್ರೀ ಹವಾ ಮಲ್ಲಿನಾಥ ಮಹಾರಾಜರು ಇವರು ಸಾನಿಧ್ಯ ವಹಿಸುವರು.
ಕಾರ್ಯಕ್ರಮದ ಮುಗಳನಾಗಾಂವ ಕಟ್ಟಮನಿ ಹಿರೇಮಠದ ಶ್ರೀ ಷ.ಬ್ರ . ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಕಲಬುರಗಿ ಚೌಡಾಪೂರಿ ಹಿರೇಮಠದ ಶ್ರೀ ಷ.ಬ್ರ ಡಾ. ರಾಜಶೇಖರ ಶಿವಾಚಾರ್ಯರು, ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀ ಷ.ಬ್ರ. ವೀರಮಹಾಂತ ಶಿವಾಚಾರ್ಯರು, ಐನಾಪೂರ ಶ್ರೀ ಸಿದ್ಧಲಿಂಗೇಶ್ವರ ಹಿರೇಮಠದ ಶ್ರೀ ಷ.ಬ್ರ. ಉಪಮನ್ಯು ಶಿವಾಚಾರ್ಯರು, ನರನಾಳ ಹಿರೇಮಠದ ಶ್ರೀ ಷ.ಬ್ರ. ಶಿವಕುಮಾರ ಶಿವಾಚಾರ್ಯರು, ಯಳಸಂಗಿ ಶ್ರೀ ಸಿದ್ಧಾರೂಢ ಮಠದ ಶ್ರೀ ಪೂಜ್ಯ ಶೋ.ಬ್ರ. ಮರಮಾನಂದ ಮಹಾಸ್ವಾಮಿಗಳು, ಚಲಗೇರಿ ಜಗದ್ಗುರು ರೇಣುಕಾಚಾರ್ಯ ಕುಟೀರ ಚಲಗೇರಿ ಶ್ರೀ ಷ.ಬ್ರ, ಶಾಂತವೀರ ಶಿವಾಚಾರ್ಯರು, ನೀಲೂರ ಬಂಗಾರ ಜಡೆ ನೀಲಕಂಠೇಶ್ವರ ಹಿರೇಮಠದ ಶ್ರೀ ಪೂಜ್ಯ ಶರಣಯ್ಯ ಸ್ವಾಮಿಗಳು ಇವರ ಸಮ್ಮುಖದಲ್ಲಿ ಜರುಗುವುದು.
ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸುವರು. ವೈದ್ಯಕಿಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಜ್ಯೋತಿ ಬೆಳಗಿಸುವರು, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸುವರು.
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ, ಶಾಸಕ ಅಲ್ಲಮಪ್ರಭು ಪಾಟೀಲ, ಹುಮನಾಬಾದ ಶಾಸಕ ಡಾ.ಸಿದ್ದಲಿಂಗ ಪಾಟೀಲ, ಕೆಕೆಆರ್‍ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೇಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ದೊಡ್ಡಪ್ಪಗೌಡ ಪಾಟೀಲ ನರಿಬೊಳ, ಬಿಜೆಪಿ ನಗರ ಅಧ್ಯಕ್ಷ ಚಂದ್ರಕಾಂತ ಬಿ. ಪಾಟೀಲ, ಅ.ಭಾ.ವೀ.ಲಿಂ. ಮಹಾಸಭಾದ ಅಧ್ಯಕ್ಷ ಶರಣು ಮೋದಿ, ಬಿ.ಜೆ.ಪಿ. ಮುಖಂಡ ಶಿವಕಾಂತ ಮಹಾಜನ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣಕುಮಾರ ಎಸ್. ಪಾಟೀಲ, ತಾ.ಪಂ.ಮಾಜಿ ಅಧ್ಯಕ್ಷ ಸಂಗಮೇಶ ನಾಹನಳ್ಳಿ ಹಾಗೂ ವಿವಿಧ ರಾಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಶ್ರೀ ಸರಡಗಿ ಅನ್ನಪೂರ್ಣೇಶ್ವರಿ ಬಸವಕಲ್ಯಾಣ ಸಂಸ್ಥಾನ ಮಕ್ಕಳಿಂದ ಹಾಗೂ ಶ್ರೀ ಸರಡಗಿ ಶಕ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ಕಲಬುರಗಿ ರೂಪಕ ಸಾಂಸ್ಕøತಿಕ ಕಾರ್ಯಕ್ರಮ ನಡೆವುದು.
ಅಫಜಲಪೂರ ಖ್ಯಾತ ಉದ್ದಿಮೇದಾರ ಸಂತೋಷ ಮಲ್ಲಿಕಾರ್ಜುನ ದಾಮ ಇವರಿಗೆ ವಿಶೇಷ ಸನ್ಮಾನಿಸಲಾಗುವುದು. ಹೈದ್ರಾಬಾದ ತೆಲಂಗಾಣ ಅಖಿಲ ಭಾರತ ವೀರಶೈವ ಮಹಾಸಾಭಾ ಅಧ್ಯಕ್ಷ ಮಹೇಶ ನೇತಿ ಹೈದ್ರಾಬಾದ ಇವರು ವಿಶೇಷಮಹಾದಾನಿಗಳು.
ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4-00 ಗಂಟೆಗೆ ವರೆಗೆ ಯುನೈಟೇಡ್ ಆಸ್ಪತ್ರೆ ಕಲಬುರಗಿ ಇವರ ವತಿಯಿಂದ ಉಚಿತ ಆರೋಗ್ಯ ತಪಾಷಣೆ ಶಿಬಿರ ಹಮ್ಮಿಕೋಳಲಾಗುವುದು. ಶ್ರೀ ದೇವಿಯ ಪವಿತ್ರ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗ್ರಾಮಸ್ಥರು, ಸಕಲ ಸದ್ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.