Home ಜಿಲ್ಲೆ ಕಲಬುರಗಿ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಪದವಿ ಪ್ರಧಾನ

ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಪದವಿ ಪ್ರಧಾನ

ಕಲಬುರಗಿ:ಏ.6:ಅಪ್ಪಾ ಪಬ್ಲಿಕ್ ಶಾಲೆಯ ಬಾಲವಾಟಿಕಾ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ವಿಜೃಂಭಣೆಯಿಂದ ನೆಡೆಸಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ನಳಿನಿ (ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ, ಕಲಬುರಗಿ) ಇವರನ್ನು ಸ್ಕೌಟ್ಸ್ &ಗೈಡ್ಸ್ ವಿದ್ಯಾರ್ಥಿಗಳು ಗೌರವ ನಮನದೊಂದಿಗೆ ಬರಮಾಡಿಕೊಂಡರು. ಮೂರೂ ವರ್ಷದ ಬಾಲವಾಟಿಕಾ (ನರ್ಸರಿ &ಕಿಂಡರ್ಗಾರ್ಟನ್) ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಏನ್.ಸಿ.ಸಿ. ಕೆಡೆಟ್ಸ್ ಪಥ ಸಂಚಲನದೊಂದಿಗೆ ಅವರನ್ನು ಸಮಾರಂಭಕ್ಕೆ ಬರಮಾಡಿಕೊಂಡರು. ನಂತರ, ಅತಿಥಿಗಳು ಮತ್ತು ಪ್ರಾಚಾರ್ಯರು, ಉಪ ಪ್ರಾಚಾರ್ಯರು, ಬಾಲವಾಟಿಕಾ ಸಂಯೋಜಕರು ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಪ್ರಾರ್ಥನೆ ಗೀತೆಯಿಂದ ವಂದನಾರ್ಪಣೆ ವರಗೆ, ಈ ಮಧ್ಯ ಪುಟಾಣಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಗಾನ ಮತ್ತು ನೃತ್ಯಗಳು ಹಾಗೂ ನಿರ್ವಹಣೆ ಪ್ರತಿಭೆಯನ್ನು ವೀಕ್ಷಿಸಿದ ಪೆÇೀಷಕರ ಮನ ಸೂರೆಗೊಂಡಿತು. ವಿದ್ಯಾರ್ಥಿಗಳ ವೈವಿಧ್ಯಮಯ ಪ್ರದರ್ಶನದ ನಂತರ ಶಾಲಾ ಶಿಕ್ಷಣದ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗಳಿಸಿದ ಬಾಲವಾಟಿಕಾ ವಿದ್ಯಾರ್ಥಿಗಳಿಗೆ ಪದವಿ ಪತ್ರ ನೀಡಿ ಸನ್ಮಾನಿಸಲಾಯಿತು.
ಸಮಾರಂಭ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ಮುಖ್ಯ ಅತಿಥಿ ಶ್ರೀಮತಿ ಡಾ. ನಳಿನಿ ಏ. ಬಿ. ಅವರು ವಿದ್ಯಾರ್ಥಿಗಳನ್ನು ಹಾಗೂ ಪೆÇೀಷಕರನ್ನು ಅಭಿನಂದಿಸಿ, ಮಕ್ಕಳ ಜ್ಞಾನಾತ್ಮಕ ಮತ್ತು ಭಾವನಾತ್ಮಕ ಬೆಳವಣಿಗೆಯ ಬಗ್ಗೆ ಕಿವಿಮಾತು ಹೇಳಿದರು. ಶಾಲೆಯ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕತಪಡಿಸುತ್ತ, ವಿದ್ಯಾರ್ಥಿಗಳ ಪ್ರಭಾವಶಾಲಿ ಪ್ರದರ್ಶನದಲ್ಲಿ ಅವರ ಮತ್ತು ಅವರ ಶಿಕ್ಷಕರ ಪರಿಶ್ರಮವು ಎದ್ದು ಕಾಣುತ್ತಿತ್ತು ಎಂದು ಹೇಳಿದರು.
ಪ್ರಾಚಾರ್ಯರಾದ ಶ್ರೀ ಶಂಕರಗೌಡ ಹೊಸಮನಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರನ್ನು ನೆನೆಸುತ್ತ, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ. ಅಪ್ಪಾ (ಚೇರ್ ಪರ್ಸನ್, ಶರಣಬಸವೇಶ್ವರ ವಿದ್ಯಾವರ್ಧಕಃ ಸಂಘ, ಕಲಬುರಗಿ) ಹಾಗೂ ಪೂಜ್ಯ ದೊಡ್ಡಪ್ಪಾಜಿ (9ನೆಯ ಪೀಠಾಧಿಪತಿ, ಶರಣಬಸವೇಶ್ವರ ಸಂಸ್ಥಾನ, ಕಲಬುರಗಿ) ಅವರ ಆಶೀರ್ವಾದಗಳನ್ನು ಕೋರುತ್ತಾ, ಅವರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಮಾರ್ಗದರ್ಶಕರಾದ ಶ್ರೀ ಏನ್. ಎಸ. ದೇವರ್ಕಲ್ ಇವರನ್ನು ಕೂಡ, ಈ ಸಂಧರ್ಭದಲ್ಲಿ ನೆನೆಸಿಕೊಳ್ಳುತ್ತಾ ಅವರಿಗೂ ಶಾಲೆಯ ಪರವಾಗಿ ಋಣಾನುಭಾರವನ್ನು ವ್ಯಕ್ತಪಡಿಸುತ್ತ ಧನ್ಯವಾದಗಳನ್ನು ತಿಳಿಸಿದರು.
ಈ ದಿನವನ್ನು ತಮ್ಮ ಮಕ್ಕಳಿಗಾಗಿ ವಿಶೇಷವಾಗಿಸಿದ ಪೆÇೀಷಕರಿಗೂ ಧನ್ಯವಾದಗಳನ್ನು ತಿಳಿಸಿದರು. ಬಾಲಕರ ಜ್ಞಾನಾತ್ಮಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಉತ್ತೆಜುಸುವಲ್ಲಿ, ಕೆ.ಜಿ. ಶಿಕ್ಷಣವು ಮಹತ್ವದ ಪಾತ್ರವಹಿಸುತ್ತದೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ದೃಢವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.
ಎನ್.ಸಿ.ಸಿ. ಕೆಡೆಟ್‍ಗಳ ನೇತೃತ್ವದಲ್ಲಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಪದವಿ ಪ್ರಧಾನ ಸಮಾರಂಭವು ಮುಕ್ತಾಯಗೊಂಡಿತು.