Home ಜಿಲ್ಲೆ ಕಲಬುರಗಿ ಗೌಡಗಾಂವ: ಗುರುವಂದನಾ ಕಾರ್ಯಕ್ರಮ

ಗೌಡಗಾಂವ: ಗುರುವಂದನಾ ಕಾರ್ಯಕ್ರಮ

ಕಲಬುರಗಿ,ಮಾ.30-ಜಿಲ್ಲೆಯ ಅಫಜಲಪುರ ತಾಲೂಕಿನ ಗೌಡಗಾಂವ ಗ್ರಾಮದಲ್ಲಿ ಮಲ್ಲಿಕಾರ್ಜುನ ಹಾಗೂ ಶರಣಬಸವೇಶ್ವರರ 12ನೇ ಜಾತ್ರಾ ಮಹೋತ್ಸವದ ಅಂಗವಾಗಿ 15 ದಿನಗಳ ಪಯರ್ಂತ ಸಾಗಿ ಬರುತ್ತಿರುವ ತ್ರಿಕಾಲ ಜ್ಞಾನಿ ಚನ್ನಮಲ್ಲೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಭಾನುವಾರ ಗುರುವಂದನಾ ಕಾರ್ಯಕ್ರಮ ವಿಶೇಷವಾಗಿ ಜರುಗಿತು.
ಎಪ್ಪತ್ತು, ಎಂಬತ್ತರ ದಶಕದಲ್ಲಿ ಗೌಡಗಾಂವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಗುರುಗಳಿಗೆ ಅದ್ದೂರಿಯಾಗಿ ಗೌರವ ಸನ್ಮಾನ ಸಮರ್ಪಣೆ ಮಾಡಲಾಯಿತು. ವಿದ್ಯಾರ್ಥಿಗಳೆಲ್ಲರೂ ಸಡಗರದಿಂದ ಸಂಭ್ರಮದ ಗುರುಭಕ್ತಿಯನ್ನು ತೋರಿದರು. ಶಿಕ್ಷಕರು ಕೂಡ ತಮ್ಮ ಮನದಾಳದ ಮಾತುಗಳನ್ನು ಹೇಳಿದರು. ಪರಮೇಶ್ವರ ಕಣ್ಣಿ ಅವರು ಗುರು ಶಿಷ್ಯರ ಬಾಂಧವ್ಯ ಹೀಗೆ ಗಟ್ಟಿಯಾಗಿರಲೆಂದು ತಿಳಿಸಿದರು.
ಭೀಮರಾವ ಮಲಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.